ನಾದ ಮುನ್ನವೊ ಬಿಂದು ಮುನ್ನವೊ?
ಕಾಯ ಮುನ್ನವೊ ಜೀವ ಮುನ್ನವೊ?
ಜೀವ ಕಾಯದ ಕುಳಸ್ಥಳಂಗಳ ಬಲ್ಲವರು ನೀವು ಹೇಳಿರೆ?
ಗುಹೇಶ್ವರಾ, ನೀನು ಮುನ್ನವೊ ನಾನು ಮುನ್ನವೊ?
ಬಲ್ಲವರು ನೀವು ಹೇಳಿರೆ?
Hindi Translationक्या नाद पहले या बिंदु पहले?
क्या काय पहले या जीव पहले ?
जीव –काया स्वरूप जाने तो आप बताइए।
गुहेश्वरा, क्या तुम पहले या मैं पहले ?
जाने तो आप बताइए।
Translated by: Eswara Sharma M and Govindarao B N
English Translation
Tamil Translationநாதம் முன்னதோ பிந்து முன்னதோ?
உடல் முன்னதோ ஜீவன் முன்னதோ?
ஜீவன் உடலின் சொரூபத்தை வல்ல நீவிர் கூறுமின்,
குஹேசுவரனே, நீ முன்னரோ, நான்முன்னரோ?
வல்லவர் நீர் கூறுமின்.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಐಕ್ಯಸ್ಥಲ
ಶಬ್ದಾರ್ಥಗಳುಕಾಯ = ಸೂಕ್ಷ್ಮಶರೀರ, ಅಹಂ-ಮಮ ಭಾವಗಳ ತಾಣವಾದ ಮನಸ್ಸು; ಕುಳಸ್ಥಳಗಳು = ಆದ್ಯಂತಗಳು, ಸ್ವರೂಪಗಳು; ಜೀವ = ಆ ಕಾಯದ ಅಭಿಮಾನಿ, ಮನೋಗತ ಪ್ರಜ್ಞೆ; ನಾದ = ಜಂಗಮ; ನಾನು = ಭಕ್ತನು, ಶರಣನು; ನೀರು = ದೇವನು; ಬಿಂದು = ಲಿಂಗ; Written by: Sri Siddeswara Swamiji, Vijayapura