ಅರಿವರಿತು ಬೆರಗು ನಿಬ್ಬೆರಗಾಯಿತೆಂಬ ಜ್ಞಾನವಿದೇನೊ?
`ನಾsಹಂ' ಎಂಬಲ್ಲಿ ತಾನಾರೊ?
`ಕೋsಹಂ' ಎಂಬಲ್ಲಿ ಮುನ್ನಾರೊ?
`ಪರಬ್ರಹ್ಮ ಸೋಹಂ' ಎಂಬಲ್ಲಿ ಮುನ್ನ ತಾನೇನಾಗಿದ್ದನೊ?
ʼಚಿದೋಹಂʼ ಎಂಬ ಹಮ್ಮಿನ ಮಾಲೆ ಇದೇನು ಹೇಳಾ?
`ನಿಃಶಬ್ದಂ ಬ್ರಹ್ಮ ಉಚ್ಯತೇ' ಎಂಬ ಶಬ್ದವಿಡಿದು
ಬಳಲುವ ಕಾರಣವಿದೇನು ಹೇಳು ಗುಹೇಶ್ವರಾ?
Hindi Translationज्ञान छिपकर तन्मयता में लगा ज्ञान है क्या ?
’नाहं’ कहने में मैं कौन ?
'कोऽहं' कहने में पहले कौन ?
'परब्रह्म सोऽहं’ कहने के पहले मैं क्या हुआ था?
'चिदहं' कहने में अहंकार की भवमाला यह क्या कहो ?
'नि:शब्द' ब्रह्म उच्चते- शब्दानुसार,
थकने का कारण क्या है कहो गुहेश्वरा ?
Translated by: Eswara Sharma M and Govindarao B N
English Translation
Tamil Translationஅறிவடங்கி இணைந்தேன் எனும் ஞானம் இது ஏனோ?
“நாஹம்” என்பதிலே தான்யாரோ?
“கோSஹம்” என்பதிலே நான் யாரோ?
“ப்ரப்ரஹ்ம ஸோஹம் “என்பதிலே நான் யாராக இருந்தேன்?
“சிதஹம்” என்பதிலே பிணைக்கும் பிறவிமாலை இது ஏனோ?
“நி:சப்தம்ப்ரஹ்மம் உச்யதே” என்று மொழிந்து
சோர்வுறுவது இதேனோ கூறுவாய் குஹேசுவரனே.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಐಕ್ಯಸ್ಥಲ
ಶಬ್ದಾರ್ಥಗಳು"ನಾಹಂ" = ನ ಅಹಂ=(ಅದು) ನಾನಲ್ಲ; "ನಿಃಶಬ್ದಂ ಬ್ರಹ್ಮ ಉ = ಬ್ರಹ್ಮವು ನಿಃಶಬ್ದ ಎಂದು ಹೇಳಲಾಗುತ್ತದೆ; ಅರತು = ಅಡಗು, ಮರೆಯಾಗು; ಅರಿವು = ಬಾಹ್ಯಭಾನ, ಲಿಂಗದ ಹೊರತಾಗಿರುವ ಅನ್ಯಭಾನ; ಕೋsಹಂ = ಕಃ ಅಹಂ=ನಾನು ಯಾರು?; ಚಿದಹಂ = ಚಿತ್+ಅಹಂ-ನಾನು ಕೇವಲ ಚಿದ್ರೂಪನು; ಬೆರಗು ಹತ್ತು = ತನ್ಮಯತೆಯುಂಟಾಗು, ಸಮಾಧಿಸ್ಥಿತಿಯಲ್ಲಿ ನಿಲ್ಲು; ಭವಮಾಲೆ = ಭವಕ್ಕೆ ಕಾರಣವಾದ ಭಾವನೆಗಳು, ಭವದ ಮಾಲೆ-ಭವಚಕ್ರ; ಸೋsಹಂ = ಸಃ ಅಹಂ=ಆ ಪರಬ್ರಹ್ಮನೇ ನಾನು; Written by: Sri Siddeswara Swamiji, Vijayapura