ಕಾಳರಕ್ಕಸಿಗೊಬ್ಬ ಮಗ ಹುಟ್ಟಿ,
ಕಾಯದ ರಾಶಿಯ ಮೊಗೆವುತ್ತ ಸುರಿವುತ್ತಲಿದ್ದನಯ್ಯಾ!
ಕಾಳರಕ್ಕಸಿಯ ಮೂಗು ಮೊಲೆಯ ಕೊಯ್ದು,
ದೇವಕನ್ನಿಕೆಯ ಮೊರೆಹೊಕ್ಕು,
ಬಾಯ ತುತ್ತೆಲ್ಲವನು ಉಣಲೊಲ್ಲದೆ ಕಾರಿದಡೆ,
ಆತನೆ ಭಕ್ತನೆಂದೆಂಬೆ ಗುಹೇಶ್ವರಾ.
Transliteration Kāḷarakkasigobba maga huṭṭi,
kāyada rāśiya mogevutta surivuttaliddanayyā!
Kāḷarakkasiya mūgu moleya koydu,
dēvakannikeya morehokku,
bāya tuttellavanu uṇalollade kāridaḍe,
ātane bhaktanendembe guhēśvarā.
Hindi Translation काला राकसी को बेटा पैदा होकर
कई शरीर के ढेर बटोरते, बरस रहा है।
काला राकसी के नाक-कुच काटकर
देवकन्निका का सहारा माँगते
कौर बिना खाये उल्टी करे तो
वहीं भक्त है गुहेश्वरा ।
Translated by: Eswara Sharma M and Govindarao B N
Tamil Translation காரிருள் எனும் அரக்கிக்கு ஒரு மகன் பிறந்து
பலபிறவிகளை எய்தி பிறவிச் சக்கரத்தில் சுழல்கிறான்.
காரிருளரக்கியின் மூக்கு, முலையைக் கொய்து
தேவகன்னிகையிடம் தஞ்சமடைந்து
வாயில் கவளங்களை உண்ணாது விட்டொழிப்பின்
அவனையே பக்தன் என்பேன் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಕಾಳರಕ್ಕಸಿ = ತಮಂಧಕಾರ, ಮೂಲ ಅವಿದ್ಯೆ; ದೇವಕನ್ನಿಕೆ = ಶ್ರೀಗುರೂಪದೇಶದಿಂದ ಲಭ್ಯವಾದ ವಿವೇಕ; ಬಾಯ ತುತ್ತು = ಭೋಗಭಾಗ್ಯಗಳು, ತಾನು ಸಂಪಾದಿಸಿದ ಧನಕನಕಾದಿಗಳು;
Written by: Sri Siddeswara Swamiji, Vijayapura