ಮೇರುವ ಸಾರಿದ ಕಾಗೆ ಹೊಂಬಣ್ಣವಾಗದಿದ್ದಡೆ,
ಆ ಮೇರುವಿಂದತ್ತಣ ಹುಲುಮೊರಡಿಯೆ ಸಾಲದೆ?
ದೇವಾ, ನಿಮ್ಮ ಪೂಜಿಸಿ ಧಾವತಿಗೊಂಬಡೆ,
ಆ ಧಾವತಿಯಿಂದ ಮುನ್ನಿನ ವಿಧಿ[ಯೆ] ಸಾಲದೆ?
ಗುಹೇಶ್ವರಾ, ನಿಮ್ಮ ಪೂಜಿಸಿ ಸಾವಡೆ,
ನಿಮ್ಮಿಂದ ಹೊರಗಣ ಜವನೆ ಸಾಲದೆ?
Transliteration Mēruva sārida kāge hombaṇṇavāgadiddaḍe,
ā mēruvindattaṇa hulumoraḍiye sālade?
Dēvā, nim'ma pūjisi dhāvatigombaḍe,
ā dhāvatiyinda munnina vidhi[ye] sālade?
Guhēśvarā, nim'ma pūjisi sāvaḍe,
nim'minda horagaṇa javane sālade?
Hindi Translation मेरु पर्वत जाने से कौआ सोने का रंग न बना,
उस मेरु से छोटी पहाड़ी ही काफी नहीं ?
देवा तुम्हारी पूजा करके क्लेश दूर न हो तो
उस क्लेश से पहले की विधि ही काफी नहीं ?
गुहेश्वरा तुम्हारी पूजा से स्वर्ग न मिले तो
तुमसे बाहर का यम ही काफी नहीं?
Translated by: Eswara Sharma M and Govindarao B N
Tamil Translation மேருவை அடைந்த காகம் பொன்னிறம் பெறவில்லை எனின்
மேருவை அடுத்துள்ள சிறு குன்று போதாதோ?
இறைவனே, உம்மை வணங்கி, துன்பமுற்றால்
அந்த துன்பத்தை விட, முன்பிருந்த நிலையே மேலன்றோ?
குஹேசுவரனே, உம்மை பூஜித்தும் அமர நிலை இல்லையெனின்
உம்மிடமிருந்து வேறுபட்ட உலகியலே மேலானதன்றோ
Translated by: Smt. Kalyani Venkataraman, Chennai
ಶಬ್ದಾರ್ಥಗಳು ಜವನೆ = ಮರ್ತ್ಯಜೀವನ.; ಧಾವತಿಗೊಳ್ಳು = ಕ್ಲೇಶಕ್ಕೆ ಒಳಗಾಗು, ವ್ಯರ್ಥವಾಗಿ ಪ್ರಯಾಸಪಡು; ನಿಮ್ಮಿಂದ ಹೊರಗಣ = ನಿಮ್ಮಿಂದ ಅನ್ಯವಾದ.; ಮೇರು = ಕವಿಸಮಯದ ಸುವರ್ಣಗಿರಿ;
Written by: Sri Siddeswara Swamiji, Vijayapura