ತೆರಹಿಲ್ಲ ಘನ ಕುರುಹಿಂಗೆ ಬಾರದ ಮುನ್ನ
ತೋರಿದವರಾರು ಹೇಳಾ ಮಹಾಘನ ಲಿಂಗೈಕ್ಯವನು?
ಆರೂಢದ ಕೂಟದಲ್ಲಿ ನಾನಾರುವ ಸಾಕ್ಷಿಯ ಕಾಣೆನು.
ಬೇರೆ ಮಾಡಿ ನುಡಿಯಬಹುದೆ ಪ್ರಾಣಲಿಂಗವನು?
ಅರಿವು ಸ್ವಯವಾಗಿ ಮರಹು ನಷ್ಟವಾದಲ್ಲಿ
ಗುಹೇಶ್ವರಾ, ನಿಮ್ಮ ಶರಣನುಪಮಾತೀತನು.
Transliteration Terahilla ghana kuruhiṅge bārada munna
tōridavarāru hēḷā mahāghana liṅgaikyavanu?
Ārūḍhada kūṭadalli nānāruva sākṣiya kāṇenu.
Bēre māḍi nuḍiyabahude prāṇaliṅgavanu?
Arivu svayavāgi marahu naṣṭavādalli
guhēśvarā, nim'ma śaraṇanupamātītanu.
Hindi Translation अखंड महा घन व्यक्त होने के पहले
दिखानेवाला कौन कहो महा घन लिंगैक्य को ?
ज्ञानियों की सभा में मैं कौनहूँ कहने साक्षी कोई नहीं।
क्या प्राणलिंग को अलगकर कह सकते?
ज्ञान स्वयं होकर भूल नष्ट हो तो
गुहेश्वरा, तुम्हारा शरण उपमातीत है।
Translated by: Eswara Sharma M and Govindarao B N
Tamil Translation சந்தற்ற முழுமை வெளிப்படும் முன்பு
உலகைஉட்கொண்ட ஞான வயலைக் காட்டியதுயாரோ?
அனைத்தையுமுட்கொண்ட நிலைக்கு சாட்சியைக் காணேன்.
பிராணலிங்கத்தை வேறுபடுத்திக் கூறவியலுமோ?
அறிவு தானாகி, மறதி அகன்றால்
குஹேசுவரனே, உம்சரணன் உவமையற்றவன்.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಆರೂಢದ ಕೂಟ = ಎಲ್ಲ ಎಲ್ಲವನ್ನೂ ತನ್ನೊಳು ಒಳಗೊಂಡ ಸ್ಥಿತಿ; ಕುರುಹಿಂಗೆ ಬರು = ವ್ಯಕ್ತವಾಗು; ತೆರಹು = ಸಂದು, ಎಡೆ; ಮಹಾಘನ = ಪರವಸ್ತು; ಮಹಾಘನಲಿಂಗೈಕ್ಯ = ಚರಾಚರವಾದ ಸರ್ವವನ್ನು ಒಳಗೊಂಡಿರುವ ಅಭಿನ್ನ ಸ್ಥಿತಿ; ಸಾಕ್ಷಿ = ಆ ಮಹಾಘನವನ್ನು ಬೇರಾಗಿ ನಿಂತು ನೋಡುವವ; ಸ್ವಯವಾಗು = ತನ್ನ ಸ್ವರೂಪವೆ ಆಗು;
Written by: Sri Siddeswara Swamiji, Vijayapura