•  
  •  
  •  
  •  
Index   ವಚನ - 681    Search  
 
ಎಂಬತ್ತುನಾಲ್ಕು ಲಕ್ಷ ಒಟ್ಟೆ ಮೂರು ತತ್ತಿಯನಿಕ್ಕಿತ್ತ ಕಂಡೆ. ಆನೆ ಆಡ ಹೋದಡೆ ಒಂದು ಚಿಕ್ಕಾಡು ನುಂಗಿತ್ತ ಕಂಡೆ, ನಾರಿಯಾಡ ಹೋದಡೆ ಒಂದು ಚಂದ್ರಮತಿಯ ಕಂಡೆನು. ಪೃಥ್ವೀಮಂಡಲವನೊಂದು ನೊಣ ನುಂಗಿತ್ತ ಕಂಡೆನು. ಗುಹೇಶ್ವರನೆಂಬ ಲಿಂಗವ ಕಂಡವರುಳ್ಳಡೆ ನೀವು ಹೇಳಿರೆ.
Transliteration Embattunālku lakṣa oṭṭe mūru tattiyanikkitta kaṇḍe. Āne āḍa hōdaḍe ondu cikkāḍu nuṅgitta kaṇḍe, nāriyāḍa hōdaḍe ondu candramatiya kaṇḍenu. Pr̥thvīmaṇḍalavanondu noṇa nuṅgitta kaṇḍenu. Guhēśvaranemba liṅgava kaṇḍavaruḷḷaḍe nīvu hēḷire.
Hindi Translation चौरासी लाख ऊँट तीन अंडे रखा देखा; गज खेलने गये तो एक पिस्सु निगला था। नारी खेलने गयी तो एक चंद्रमति देखा; पृथ्वि मंडल को एक मक्खी निगली देखा! गुहेश्वर कहने लिंग को देखे तो बताईए। Translated by: Eswara Sharma M and Govindarao B N
Tamil Translation எண்பத்துநான்கு இலட்ச ஒட்டகங்கள், மூன்றுமுட்டைகள் இட்டதைக் கண்டேன். யானை ஆடச்சென்றுழி ஒரு புழுவிழுங்கியதைக்கண்டேன். பெண் ஆடச்சென்றுழி ஒரு அமைதியைக் கண்டேன். நிலமண்டலத்தை ஒரு ஈ விழுங்கியதைக் கண்டேன். குஹேசுவரனெனும் இலிங்கத்தைக் கண்டவர் இருப்பின் கூறுமின்! Translated by: Smt. Kalyani Venkataraman, Chennai
ಶಬ್ದಾರ್ಥಗಳು ಆಡಹೋಗು = ವ್ಯವಹರಿಸು; ಆಡಹೋಗು = ಲಿಂಗಾನುಸಂಧಾನವ ಗೈ; ಆನೆ = ಅಹಂ ಭಾವ, ಅಹಂಕಾರ; ಎಂಬತ್ತು ನಾಲ್ಕು ಲಕ್ = ಎಂಬತ್ತು ನಾಲ್ಕು ಲಕ್ಷ ಬಗೆಯ ದೇಹಗಳು; ಒಟ್ಟೆ = ಒಂಟೆ; ಆ ನಾನಾ ಬಗೆಯ ದೇಹಗಳ ಧರಿಸಿ, ಕೊನೆಗೆ ಮಾನವ ದೇಹವನ್ನು ಪ್ರವೇಶಿಸಿದ ಜೀವ; ಚಂದ್ರಮತಿ = ಪ್ರಶಾಂತಿ; ಚಿಕ್ಕಾಡು = ಚಿಗಟ, ಆತ್ಮಜ್ಞಾನ; ನಾರಿ = ಲಿಂಗಪತಿಯ ಸತಿಯಾದ ಶರಣ; ನುಂಗು = ಅಡಗಿಸು; ನೊಣ = ಲಿಂಗಭಾವ; ಪೃಥ್ವಿಮಂಡಲ = ಭೌತ ವಿಶ್ವ; ಮೂರು ತತ್ತಿಯನ್ನಿಡು = ವಿಶ್ವ, ತೈಜಸ, ಪ್ರಾಜ್ಞ- ಎಂಬ ಮೂರು ವಿಧ ಭಾವನೆಗಳನ್ನು ಹೊಂದು; Written by: Sri Siddeswara Swamiji, Vijayapura