ಸೊಪ್ಪಡಗಿದ ಸುಮ್ಮಾನಿಗಳವರಲ್ಲಿ
ಗತಿಯನರಸುವರೆ?
ಅವರಲ್ಲಿ ಮತಿಯನರಸುವರೆ?
ಅಂಗವೆಲ್ಲ ನಷ್ಟವಾಗಿ ಲಿಂಗಲೀಯವಾದವರಲ್ಲಿ
ಗತಿಯನರಸುವರೆ?
ಅವರಲ್ಲಿ ಮತಿಯನರಸುವರೆ?
ಗುಹೇಶ್ವರನೆಂಬ ನಿಜ ನಿಂದವರಲ್ಲಿ?
Transliteration Soppaḍagida sum'mānigaḷavaralli
gatiyanarasuvare?
Avaralli matiyanarasuvare?
Aṅgavella naṣṭavāgi liṅgalīyavādavaralli
gatiyanarasuvare?
Avaralli matiyanarasuvare?
Guhēśvaranemba nija nindavaralli?
Hindi Translation निरहंकारि अनुभावियों में गति ढूँढ सकते ?
उनमें मति ढूँढ सकते ?
सर्वांग नष्ट होकर लिंग में समाहुए में गति ढूँढ सकते ?
उनमें मति ढूँढ सकते,
गुहेश्वर जैसे निज ज्ञानियों में ?
Translated by: Eswara Sharma M and Govindarao B N
Tamil Translation அமைதியுற்ற அனுபவமுள்ளோரிடம்,
மாறுபட்ட நினைவு இருக்குமோ?
அவர்களிடம் மாறுபட்ட அறிவு இருக்குமோ?
உடலுணர்வற்று, இலிங்கத்துடனினைந்தோரிடம்
மாறுபட்ட நினைவைத் தேடுவரோ?
குஹேசுவரனெனும் வெட்டவெளியில் இணைந்தோருக்கு,
அவர்களிடம் மாறுபட்ட அறிவு இருக்குமோ?
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಂಗ = ನಾನು ಎಂಬ ಭಾವವುಳ್ಳ ಜೀವಚೇತನ, ಜೀವಭಾವ; ಗತಿ = ಭಿನ್ನ ನೆನಹು; ನಿಜನಿಂದವರು = ನಿಜದಲ್ಲಿ ನಿಂದವರು, ಪರವಸ್ತುವಿನಲ್ಲಿ ಒಂದುಗೂಡಿದವರು; ಮತಿ = ಭಿನ್ನ ಜ್ಞಾನ; ಲೀಯವಾಗು = ಬೆರೆದು ಒಂದಾಗು; ಸುಮ್ಮಾನಿಗಳು = ಪ್ರಸನ್ನ ಚೇತಸರು, ಅನುಭಾವಿಗಳು; ಸೊಪ್ಪಡಗು = ಶಾಂತವಾಗು, ಅಹಂಕಾರವಳಿದಿರು;
Written by: Sri Siddeswara Swamiji, Vijayapura