ಅಕ್ಷರವ ಬಲ್ಲೆವೆಂದು ಅಹಂಕಾರವೆಡೆಗೊಂಡು,
ಲೆಕ್ಕಗೊಳ್ಳರಯ್ಯಾ.
ಗುರುಹಿರಿಯರು ತೋರಿದ ಉಪದೇಶದಿಂದ;
ವಾಗದ್ವೈತವನೆ ಕಲಿತು ವಾದಿಪರಲ್ಲದೆ
ಆಗು-ಹೋಗೆಂಬುದನರಿಯರು.
ಭಕ್ತಿಯನರಿಯರು ಮುಕ್ತಿಯನರಿಯರು
ಮತ್ತೂ ವಾದಕ್ಕೆಳಸುವರು.
ಹೋದರು, ಗುಹೇಶ್ವರಾ ಸಲೆ ಕೊಂಡಮಾರಿಗೆ.
Transliteration Akṣarava ballevendu ahaṅkāraveḍegoṇḍu,
lekkagoḷḷarayyā.
Guruhiriyaru tōrida upadēśadinda;
vāgadvaitavane kalitu vādiparallade
āgu-hōgembudanariyaru.
Bhaktiyanariyaru muktiyanariyaru
mattū vādakkeḷasuvaru.
Hōdaru, guhēśvarā sale koṇḍamārige.
Hindi Translation अक्षर ज्ञानी होकर अहंकार से किसी का लक्ष्य न करते,
गुरु-बुज़ुर्ग दिखाये उपदेश से
वागद्वैत सीखकर वादा करनेवाले
जीवन क्रम नहीं जानते ।
भक्ति नहीं जानते, युक्ति नहीं जानते, मुक्ति नहीं जानते।
और भी चर्चा का आह्वान करते गये।
गुहेश्वरा, बिना लाभ व्यवहार करनेवाले जैसे हैं।
Translated by: Eswara Sharma M and Govindarao B N
Tamil Translation சாத்திரத்தை வல்லோமென செருக்குற்று
எதிலும் கவனம் கொள்ளார்.
குரு, பெரியோர் காட்டிய வழிமுறையால்
அத்துவைதத்தைக் கற்று வாதிப்பரல்லதே
தம்வாழ்வு, இவ்வுலகம், பரம்பொருளை அறியார்.
பக்தியையறியார், யுக்தியையறியார், முக்தியையறியார்
இருப்பினும் மீண்டும் வாதம் புரிவர்
குஹேசுவரனே, பயனற்ற முயற்சி, நன்மை ஏதுமில்லை.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಗುರುಹಿರಿಯರು = ಅನುಭಾವಿಗಳು; ಭಕ್ತಿ = ದೇವನಲ್ಲಿಟ್ಟ ಅನನ್ಯ ಅನುರಾಗ.; ಮಾರಿಂಗೆ ಹೋಗು = ವ್ಯರ್ಥ ಪ್ರಯಾಸಪಡು, ಲಾಭವಿಲ್ಲದೆ ಹೋಗು; ಮುಕ್ತಿ = ಭವಬಂಧನದಿಂದ ಪೂರ್ಣ ಬಿಡುಗಡೆ, ಜೀವ-ಶಿವರ ಸಾಮರಸ್ಯ; ಯುಕ್ತಿ = ಉಪಾಯ; ಸಾಂಸಾರಿಕ ಬಂಧನಗಳನ್ನು ಕುಶಲತೆಯಿಂದ ಕಳೆದುಕೊಳ್ಳುವ ಕಲೆ.;
Written by: Sri Siddeswara Swamiji, Vijayapura