Index   ವಚನ - 715    Search  
 
ಅಂಗವಿಕಾರಿ ಲಿಂಗವಿಕಾರಿಯನರಿಯ. ಲಿಂಗವಿಕಾರಿ ಅಂಗವಿಕಾರಿಯನರಿಯ. ಅಂಗವೇ ದಿಂಡುನಾಳ ಲಿಂಗವೇ.... ನವ ಸುರಾಳ. ಕಳಚಿದಡೆ ತೋರಲಿಲ್ಲ, ತೋರಿದಡೆ ಬೆಚ್ಚಲಿಲ್ಲ. ಸುರುಳಿನೊಳಗೆ ಸುತ್ತಿ ಹೊರಗಿರಿಸಿದೆನು ಕಾಣಾ, ಗುಹೇಶ್ವರಾ.