ಅಂಗಸಂಸಾರ ಲಿಂಗದಲ್ಲಿ ಅರತು
ಕಾಯವೆಂಬ ಸಂಬಂಧ ಸಂಶಯವಳಿದು
ನಿಸ್ಸಂದೇಹಿಯಾಗಿಪ್ಪನು ನೋಡಾ ಬಸವಣ್ಣನು.
ಪ್ರಾಣ ಭಾವವೆಂಬ ಶಂಕೆ ತಲೆದೋರದೆ
ನಿಶ್ಶಂಕ ನಿಜೈಕ್ಯನಾಗಿಪ್ಪನು ನೋಡಾ ಬಸವಣ್ಣನು.
ಆ ಬಸವಣ್ಣನ ಅಂತರಂಗದಲ್ಲಿ ನಿಶ್ಚಿಂತನಿವಾಸಿಯಾಗಿದ್ದೆನು.
ಆ ಬಸವಣ್ಣನ ಅಂತರಂಗದಲ್ಲಿ
ನಿರಾಲಂಬ ಜ್ಞಾನಿಯಾಗಿದ್ದೆನು.
ಆ ಬಸವಣ್ಣನೊಳಗೆ ನಾನು ಅಳಿದುಳಿದೆನು.
ಬಸವಣ್ಣನೆನ್ನ ಅಂತರಂಗದೊಳಗೆ
ನಿಜನಿವಾಸಿಯಾಗಿದ್ದನು.
ಇದು ಕಾರಣ: ಒಂದನೊಂದ ಬಿಚ್ಚಿ ಬೇರೆ ಮಾಡಬಾರದು ನೋಡಾ.
ಗುಹೇಶ್ವರಲಿಂಗದಲ್ಲಿ `ಸಂಗನಬಸವ-ಪ್ರಭು'ವೆಂಬ ಎರಡು
ಭಾವಭ್ರಾಂತಿಯಳಿದುಳಿದು,
ನಿಭ್ರಾಂತಿ ಎಡೆಗೊಂಡಿತ್ತು ನೋಡಾ ಚೆನ್ನಬಸವಣ್ಣಾ.
Transliteration Aṅgasansāra liṅgadalli aratu
kāyavemba sambandha sanśayavaḷidu
nis'sandēhiyāgippanu nōḍā basavaṇṇanu.
Prāṇa bhāvavemba śaṅke taledōrade
niśśaṅka nijaikyanāgippanu nōḍā basavaṇṇanu.
Ā basavaṇṇana antaraṅgadalli niścintanivāsiyāgiddenu.
Ā basavaṇṇana antaraṅgadalli
nirālamba jñāniyāgiddenu.Ā basavaṇṇanoḷage nānu aḷiduḷidenu.
Basavaṇṇanenna antaraṅgadoḷage
nijanivāsiyāgiddanu.
Idu kāraṇa: Ondanonda bicci bēre māḍabāradu nōḍā.
Guhēśvaraliṅgadalli `saṅganabasava-prabhu'vemba eraḍu
bhāvabhrāntiyaḷiduḷidu,
nibhrānti eḍegoṇḍittu nōḍā cennabasavaṇṇā.
Hindi Translation अंग संसार सूखकर लिंग में था
काय जैसा संबंध संशय दूर होकर
निस्संदेही हुआ था देखा बसवण्णा।
प्राण भाव जैसी बिना शंका
निश्यंक निजैक्य हुआ था देखा बसवण्णा।
उस बसवण्णा के अंतरंग में निश्चिंत निवासी हुआ था ।
उस बसवण्णा के अंतरंग में निरालंब ज्ञानी हुआ था।
उस बसवण्णा में मैं मिठ बचा हुआ था।
बसवण्णा मेरे अंतरंग में निज निवासी हुआ था।
इसकारण :- एक एक को खोल अलग मत करना देखा।
गुहेश्वर लिंग में ‘संगनबसवप्रभु’ जैसे दो भाव भ्रांति दूर होकर
भ्रम से दूर था देखा चेन्नबसवण्णा।
Translated by: Eswara Sharma M and Govindarao B N