ಅಂತರಂಗದಲ್ಲಿ ಅಡಗಿತ್ತೆಂದಡೆ ಭಾವಕ್ಕೆ ಪೂಜ್ಯವಲ್ಲ.
ಬಹಿರಂಗದಲ್ಲಿ ಅಡಗಿತ್ತೆಂದಡೆ ಕ್ರಿಯಾಬದ್ಧವಲ್ಲ.
ಅರಿವಿನೊಳಗೆ ಅಡಗಿತ್ತೆಂದಡೆ ಮತಿಗೆ ಹವಣಲ್ಲ.
ಭಾವ ನಿರ್ಭಾವ ನಿಶ್ಶೂನ್ಯವನು ಕಾಂಬ ಪರಿ ಎಂತು ಹೇಳಾ?
ಕಂಡು ತನ್ನೊಳಗಿಂಬಿಟ್ಟುಕೊಂಬ ಪರಿ ಎಂತು ಹೇಳಾ?
ಗುಹೇಶ್ವರನೆಂಬ ಲಿಂಗವನರಿದು ಕೂಡಿ
ಸುಖಿಯಹ ಪರಿ ಎಂತು ಹೇಳಾ ಸಂಗನಬಸವಣ್ಣ.
Transliteration Antaraṅgadalli aḍagittendaḍe bhāvakke pūjyavalla.
Bahiraṅgadalli aḍagittendaḍe kriyābad'dhavalla.
Arivinoḷage aḍagittendaḍe matige havaṇalla.
Bhāva nirbhāva niśśūn'yavanu kāmba pari entu hēḷā?
Kaṇḍu tannoḷagimbiṭṭukomba pari entu hēḷā?
Guhēśvaranemba liṅgavanaridu kūḍi
sukhiyaha pari entu hēḷā saṅganabasavaṇṇa.
Hindi Translation अंतरंग में रहे कहें तो भाव पूज्य नहीं,
बहिरंग में रहे कहें तो क्रियाबद्ध नहीं,
ज्ञान में रहे कहें तो मतियोग्य नहीं,
भाव निर्भाव निश्यून्य को देखने रीति कैसे कह ?
देख अपने में छिपा रखने की रीति कैसे कह ?
गुहेश्वर जैसे लिंग जानकर मिले
सुखी रहने की रीति कैसे कह संगनबसवण्णा।
Translated by: Eswara Sharma M and Govindarao B N