Index   ವಚನ - 733    Search  
 
ಅಂದಿನ ದಿನವನಂತಿರಿಸಿ, ಇಂದಿನ ದಿನವನಿಂತಿರಿಸಿ, ತಾ ಬೇರೆ ಮತ್ತೊಂದು ಪರಿಯಾದ ಅಪ್ಪಣ್ಣನು. ಅಂದಿನವನಂತಾಗದೆ ಇಂದಿನವನಂತಾಗದೆ, ಅಂತಿಂತುವ ಕೆಡಿಸಿ ಮತ್ತೊಂದಾದನವ. ಶ್ರುತಿಗೆಟ್ಟು, ಮತಿಗೆಟ್ಟು, ಹದಗೆಟ್ಟು, ಹವಣುಗೆಟ್ಟು, ಬಿಮ್ಮುಗೆಟ್ಟು, ಬೆಮಳ ವಿಮಳನಾದ ಅಪ್ಪಣ್ಣನು. ಗಣಿತ ಗುಣಿತವನಳಿದುಳಿದು, ಅಗಣಿತನ ಚಳಿತನಾದ ಅಪ್ಪಣ್ಣನು. ಅಮಳೋಕ್ಯವಾದ ಘನವ, ಅಮಳೋಕ್ಯವಾದ ಮಹವ, ಅಮಳೋಕ್ಯವಾದ ನಿಜದ ನಿಲವ; ಕುಲಗೆಟ್ಟ, ಛಲಗೆಟ್ಟ, ಲಜ್ಜೆಗೆಟ್ಟ, ಭವಗೆಟ್ಟ ಗುಹೇಶ್ವರನ ಶರಣ ಸಂಗಮೇಶ್ವರದ ಅಪ್ಪಣ್ಣನು.