ವಚನ - 747     
 
ಅಟ್ಟದ ಮೇಲೆ ಹರಿದಾಡುವ ಇಲಿ ಕಾದಿರ್ದ ಬೆಕ್ಕ ತಪ್ಪಿಸಿ, ಬೆಕ್ಕಿನ ಕಣ್ಣೊಳಡಗಿತ್ತು! ಕಣ್ಣೂ ಇಲಿಯೂ ಕೂಡೆ ಗುಹೇಶ್ವರಲಿಂಗವ ಕಂಡುದಿಲ್ಲ.