ಅನಾದಿಯಲೊಬ್ಬ ಶರಣ;
ಆಹ್ವಾನ ವಿಸರ್ಜನವಿಲ್ಲದ ಪರತತ್ತ್ವವ ಸ್ಥಾಪಿಸಿ
ಪ್ರತಿಷ್ಠೆಯ ಮಾಡುವಲ್ಲಿ
ಷಡುವರ್ಣಾತ್ಮಕ ಮೃಗಿ ಹುಟ್ಟಿದಳು ನೋಡಾ!
ಆ ಮೃಗಿಯೊಳು ಪಂಚಾಂಗ
ಪಂಚ ತಂಡದವರೆಲ್ಲ ಹುಟ್ಟಿ ವರ್ತಿಸಿ ಲಯವಾಗಿ,
ಮತ್ತೆ ಪಲ್ಲವಿಸುತಿರ್ದರು ನೋಡಾ!
ಆ ಪರತತ್ತ್ವದ ಲೀಲೆಯನು
ಆ ಶರಣನೆ ಬಲ್ಲ ಗುಹೇಶ್ವರಾ.
Transliteration Anādiyalobba śaraṇa;
āhvāna visarjanavillada paratattvava sthāpisi
pratiṣṭheya māḍuvalli
ṣaḍuvarṇātmaka mr̥gi huṭṭidaḷu nōḍā!
Ā mr̥giyoḷu pan̄cāṅga
pan̄ca taṇḍadavarella huṭṭi vartisi layavāgi,
matte pallavisutirdaru nōḍā!
Ā paratattvada līleyanu
ā śaraṇane balla guhēśvarā.
Hindi Translation अनादी में एक शरण;
बिना आह्वान विसर्जन परतत्व स्थापितकर प्रतिष्टा करने में
षड्वर्णात्मक मृगी पैदा हुई देखा।
उस मृगी के पंचांग पंचझुंड जनमें व्यवहार कर लय हुए,
फिर पल्लवित होते देखा!
उस परतत्व की लीला वह शरण ही जानता गुहेश्वरा
Translated by: Eswara Sharma M and Govindarao B N