ವಚನ - 763     
 
ಅನ್ನೆಬರ ಹಾಗೆನ್ನದಿರು ಸಂಗನಬಸವಣ್ಣಾ. ನಿನಗೆ ಬೇರೆ ಅಡಗುವ ಕುರುಹೆಂಬುದೊಂದೊಡಲುಂಟು. ಎನಗೆ ಅಂಗೈಯ ನಾಮ, ಕಾಯವೆಂಬ ಕದಳಿ, ಗುಹೇಶ್ವರನೆಂಬ ಭ್ರಮೆ ಬಿಡದು.