Index   ವಚನ - 765    Search  
 
ಅಭ್ಯಾಸದ ಮಾತಲ್ಲ, ಶ್ರೋತ್ರದ ಸುಖವಲ್ಲ, ಶಾಸ್ತ್ರದ ಅನುಭಾವದ ಮಾತಲ್ಲ. ಒಳಗಣ ಮಾತಲ್ಲ ಹೊರಗಣ ಮಾತಲ್ಲ. ಇದರಂತು ವನರಿಯರೆ, ಅನುಭಾವವ ಮಾಡಿ ಫಲವೇನಯ್ಯಾ? ಗುಹೇಶ್ವರಲಿಂಗವು ಉಪಮಾತೀತ ನೋಡಯ್ಯಾ, ಸಿದ್ಧರಾಮಯ್ಯ!