ಅಯ್ಯಾ! ನಿರವಯಶೂನ್ಯಲಿಂಗದೇಹಿ
ನಿಜಕರುಣಪ್ರಸಾದಾತ್ಮನು
ಆ ನಿರವಯ ಶೂನ್ಯಲಿಂಗದಾಚಾರದಲ್ಲಿಯೆ ನಡೆವನಯ್ಯ!
ಲೋಕವರ್ತಕ ಲೋಕಚಾತುರ್ಯಕ್ಕೆ,
ಲೋಕವ್ಯವಹರಣೆಯನನುಕರಿಸಿ ನಡೆವನಲ್ಲ!
ನಿಜಶಿವಜ್ಞಾನ-ನಿಜಶಿವಕ್ರಿಯಾಪ್ರಕಾಶವ ಸಂಬಂಧಿಸಿಕೊಂಡು
ಸರ್ವಾಂಗವು ನಿರವಯಶೂನ್ಯಲಿಂಗರೂಪವಾಗಿ
ಲಿಂಗಕ್ಕೆ ಲಿಂಗವೆ ಭಾಜನ
ಪದಾರ್ಥ-ಪ್ರಸಾದ-ಪರಿಣಾಮವಾಗಿರಬಲ್ಲಡೆ
ಅದು ಲಿಂಗೈಕ್ಯ ನೋಡ!
ನೆಲನಿಲ್ಲದ ನಿರ್ಮಲ ಚಿದ್ಭೂಮಿಯಲ್ಲಿ
ಸ್ವಯಜ್ಞಾನಶಿಶು ಉದಯವಾಯಿತ್ತು ನೋಡ!
ಆ ಸ್ವಯಜ್ಞಾನ ಶಿಶು ಊಧ್ರ್ವಲೋಕಕ್ಕೆ ಹೋಗಿ
ವ್ಯೋಮಾಮೃತ ಪ್ರಸಾದವನುಂಡು
ನಾಮ-ರೂಪು-ಕ್ರಿಯೆಗಳನಳಿದು,
ನಿರವಯಶೂನ್ಯಲೀಲೆಯ ಧರಿಸಿ
ಸೋಮನಾಳದಲ್ಲಿ ಶುಭ್ರ ಕಳೆ,
ಪಿಂಗಳನಾಳದಲ್ಲಿ ಸುವರ್ಣಕಳೆ,
ಸುಷುಮ್ನನಾಳದಲ್ಲಿ ಸುಜ್ಞಾನ ಜ್ಯೋತಿ ಪ್ರಕಾಶದಂತೆ
ಏಳುನೂರ ಎಪ್ಪತ್ತುನಾಳದಲ್ಲಿ ಹೊಳೆವುತ್ತಿರ್ಪ
ಪರಮಗುರು ಸಂಗನಬಸವಣ್ಣನ
ಬೆಳಗಿನ ನಿಜಪ್ರಸಾದದೊಳಗೆ
ಗುಹೇಶ್ವರ ಪ್ರಭುವೆಂಬ ರೂಪತಾಳಿ, ಪಕ್ವವಾದ ಮೇಲೆ
ಮತ್ತಲ್ಲಿಯೆ ನಿರವಯಶೂನ್ಯವಪ್ಪುದು
ತಪ್ಪದು ನೋಡ! ಚೆನ್ನಬಸವಣ್ಣ.
Transliteration Ayyā! Niravayaśūn'yaliṅgadēhi
nijakaruṇaprasādātmanu
ā niravaya śūn'yaliṅgadācāradalliye naḍevanayya!
Lōkavartaka lōkacāturyakke,
lōkavyavaharaṇeyananukarisi naḍevanalla!
Nijaśivajñāna-nijaśivakriyāprakāśava sambandhisikoṇḍu
sarvāṅgavu niravayaśūn'yaliṅgarūpavāgi
liṅgakke liṅgave bhājana
padārtha-prasāda-pariṇāmavāgiraballaḍe
Adu liṅgaikya nōḍa!
Nelanillada nirmala cidbhūmiyalli
svayajñānaśiśu udayavāyittu nōḍa!
Ā svayajñāna śiśu ūdhrvalōkakke hōgi
vyōmāmr̥ta prasādavanuṇḍu
nāma-rūpu-kriyegaḷanaḷidu,
niravayaśūn'yalīleya dharisi
sōmanāḷadalli śubhra kaḷe,
piṅgaḷanāḷadalli suvarṇakaḷeSuṣumnanāḷadalli sujñāna jyōti prakāśadante
ēḷunūra eppattunāḷadalli hoḷevuttirpa
paramaguru saṅganabasavaṇṇana
beḷagina nijaprasādadoḷage
guhēśvara prabhuvemba rūpatāḷi, pakvavāda mēle
mattalliye niravayaśūn'yavappudu
tappadu nōḍa! Cennabasavaṇṇa.
Hindi Translation अय्या, निरवय शून्य लिंग देही निज करुण प्रसादात्मा
उस निरवय शून्य लिंगाचार में चलता हूँ।
लोकवर्तक लोकचातुर्य से लोक व्यवहार के अनुसार न चलनेवाला
निज शिव ज्ञान-निज शिव क्रिया प्रकाश के संबंध से
सर्वांग निरवय शून्य लिंगरूप बने
लिंग का लिंग ही भाजन पदार्थ-प्रसाद-परिणाम होने से
वह लिंगैक्य देखो।
भक्ति जैसे निर्मल चिद्भूमि में
स्वयज्ञान शिशु उदय हुआ था देख, वह स्वयज्ञान शिशु
ऊर्ध्व लोक जाकर व्योमामृत प्रसाद खाकर
नाम रुप-क्रिया मिठाकर निरवय शून्य लीला धारण कर
सोमनाळ में शुभ्र कला; पिंगळनाल में सुवर्णकला;
सुषम्ननाळ में सुज्ञान ज्योति प्रकाश जैसे
सात सौ सत्तर नाळ में चमकते
परमगुरु संगनबसवण्णा के प्रकाश के निज प्रसाद में
गुहेश्वर प्रभु जैसे रूप बने, पक्व होनेपर
फिर नहीं निरवय शून्य बनना न चुकता देख
चेन्नबसवण्णा।
Translated by: Eswara Sharma M and Govindarao B N