ಅಯ್ಯಾ! ಸ್ಥೂಲದೇಹದ ಸುಖದಲ್ಲಿ
ಹೊದ್ದಿದವರು ಸೂಕರನ ಹಾಂಗೆ.
ಸೂಕ್ಷ್ಮದೇಹದ [ಸುಖ]ದಲ್ಲಿ ಹೊದ್ದಿದವರು
ಮದಗಜದಂತೆ.
ಕಾರಣ ದೇಹದ ಸುಖದಲ್ಲಿ ಹೊದ್ದಿದವರು
ರಾಜಹಂಸನ ಹಾಂಗೆ.
ಅದೆಂತೆಂದಡೆ:
ಸ್ಥೂಲದೇಹವೆಂದಡೆ ಸಪ್ತಧಾತುಯುಕ್ತವಾದ
ಪಂಚವಿಂಶತಿತತ್ತ್ವ ಸ್ವರೂಪು,
ಆ ದೇಹಕ್ಕೆ ಬಿಂದು ಮಾತ್ರ ಸುಖ
ಪರ್ವತದಷ್ಟು ದುಃಖ ನೋಡಾ.
ಸೂಕ್ಷ್ಮದೇಹವೆಂದಡೆ:
ಪಂಚರಸಾಮೃತಸ್ವರೂಪವಾದ ಕರಣಂಗಳು.
ಆ ದೇಹಕ್ಕೆ ಬಿಂದು ಮಾತ್ರ ದುಃಖವು,
ಪರ್ವತದಷ್ಟು ಸುಖ ನೋಡಾ.
ದಶವಿಧತತ್ತ್ವಸ್ವರೂಪವಾದ
ಕಾರಣದೇಹವೆಂದಡೆ:
ಅನಂತನಾದಸ್ವರೂಪವಾದ
ಏಕತತ್ತ್ವವನ್ನುಳ್ಳ ಆತ್ಮನೆ ಕಾರಣದೇಹ,
[ಅದು] ದಿವ್ಯ ಸುಧಾರಸಾಮೃತಸ್ವರೂಪವಾದ
ಮಹಾಸದ್ಗಂಧದ
ಪರಿಮಳದಂತಿಪ್ಪುದು ನೋಡಾ.
ಆ ದೇಹಕ್ಕೆ ಅಣುಮಾತ್ರ ದುಃಖವಿಲ್ಲದ
ಸುಖವುಂಟು ನೋಡಾ,
ಲಿಂಗಸಂಗಿಯಾದ ಕಾರಣ.
ಇಂತಪ್ಪ ಲಿಂಗಸಂಗದಿಂದ
ಅಖಂಡಸುಖಿ ತಾನಾಗಬೇಕಾದಡೆ
ಪಿಂಡಾದಿ ಜ್ಞಾನಶೂನ್ಯಾಂತಮಾದ
ನೂರೊಂದು ಸ್ಥಳ-ಕುಳವ
ಕರತಳಾಮಳಕವಾಗಿ ತಿಳಿದು,
ಮೇಲಾದ ಜ್ಞಾನಶೂನ್ಯಸ್ಥಲದಲ್ಲಿ ನಿಂದು,
ಪಿಂಡಾದಿ ಜ್ಞಾನ ಗುರುಕರುಣ
ಸ್ಥಲಂಗಳೆಂಬ ಮಾರ್ಗವು ತಪ್ಪದೆ,
ನಡೆ-ನುಡಿ ಸಂಪನ್ನರಾಗಿ ನಿಜಾಚರಣೆಯಲ್ಲಿ ನಿಂದು,
ಅರು ವೈರಿ ಅಷ್ಟಮದ [ಸಪ್ತ]ವ್ಯಸನವೆಂಬ
ಮಾಯಾಪಾಶಪರ್ವತಕ್ಕೆ
ವಜ್ರಾಯುಧವಾಗಿ ನಿಂದರು
ನೋಡಾ ನಮ್ಮ ಶರಣಗಣಂಗಳು.
ಇಂತು-ಕಾರಣಸ್ವರೂಪವಾದ
ಚಿದ್ಘನಲಿಂಗ ನಡೆ-ನುಡಿ-ಸ್ಥಳ-ಕುಳದನುಭಾವ
ಸುಖವ ಪಡೆಯದ
ಶೈವ ಜಡಕರ್ಮಿಗಳೆಲ್ಲ,
ಅರುವೈರಿ ಅಷ್ಟಮದ ಸಪ್ತವ್ಯಸನವೆಂಬ
ಮಾಯಾಪಾಶ ಕಾಲ ಕಾಮರ ಬಾಧೆಗೊಳಗಾಗಿ
ಗುಹೇಶ್ವರಲಿಂಗದ ಶರಣರ
ಮಾರ್ಗವನರಿಯದೆ [ಕೆಟ್ಟರು].
ಕೆಟ್ಟಿತೀ ಲೋಕ ನೋಡಾ ಸಿದ್ಧರಾಮಯ್ಯಾ.
Transliteration Ayyā! Sthūladēhada sukhadalli
hoddidavaru sūkarana hāṅge.
Sūkṣmadēhada [sukha]dalli hoddidavaru
madagajadante.
Kāraṇa dēhada sukhadalli hoddidavaru
rājahansana hāṅge.
Adentendaḍe:
Sthūladēhavendaḍe saptadhātuyuktavāda
pan̄cavinśatitattva svarūpu,
ā dēhakke bindu mātra sukha
parvatadaṣṭu duḥkha nōḍā.
Sūkṣmadēhavendaḍe:Pan̄carasāmr̥tasvarūpavāda karaṇaṅgaḷu.
Ā dēhakke bindu mātra duḥkhavu,
parvatadaṣṭu sukha nōḍā.
Daśavidhatattvasvarūpavāda
kāraṇadēhavendaḍe:
Anantanādasvarūpavāda
ēkatattvavannuḷḷa ātmane kāraṇadēha,
[adu] divya sudhārasāmr̥tasvarūpavāda
mahāsadgandhada
parimaḷadantippudu nōḍā.
Ā dēhakke aṇumātra duḥkhavillada
sukhavuṇṭu nōḍā,Liṅgasaṅgiyāda kāraṇa.
Intappa liṅgasaṅgadinda
akhaṇḍasukhi tānāgabēkādaḍe
piṇḍādi jñānaśūn'yāntamāda
nūrondu sthaḷa-kuḷava
karataḷāmaḷakavāgi tiḷidu,
mēlāda jñānaśūn'yasthaladalli nindu,
piṇḍādi jñāna gurukaruṇa
sthalaṅgaḷemba mārgavu tappade,
naḍe-nuḍi sampannarāgi nijācaraṇeyalli nindu,
aru vairi aṣṭamada [sapta]vyasanavemba
māyāpāśaparvatakke
vajrāyudhavāgi nindaruNōḍā nam'ma śaraṇagaṇaṅgaḷu.
Intu-kāraṇasvarūpavāda
cidghanaliṅga naḍe-nuḍi-sthaḷa-kuḷadanubhāva
sukhava paḍeyada
śaiva jaḍakarmigaḷella,
aruvairi aṣṭamada saptavyasanavemba
māyāpāśa kāla kāmara bādhegoḷagāgi
guhēśvaraliṅgada śaraṇara
mārgavanariyade [keṭṭaru].
Keṭṭitī lōka nōḍā sid'dharāmayyā.
Hindi Translation अय्या, स्थूल देह के सुख में रहे सूकर जैसे।
सूक्ष्म देह में रहे मदगज जैसे।
कारण देह के सुख में रहे राजहंस जैसे।
वह कैसे कहेंतो:
स्थूल देह कहें तो सप्तधातु युक्त हुआ पंचविंशति तत्व स्वरूप,
उस देह को बिंदुमात्र सुख, पर्वत जैसा दुःख देखा।
सूक्ष्म देह कहें तो – पंच रसामृत स्वरूप हुआ करण हैं।
उस देह को बिन्दुमात्र दुःख, पर्वत जैसा सुख देखा।
दशविध तत्व स्वरूप हुआ कारण देह कहें तो:
अनंत नाद स्वरूप हुआ एक तत्व रहा आमा ही कारण देह,
वह दिव्य सुधारसामृत स्वरूप हुआ महासद्गंध का
परिमल जैसे देखा।
उस देह को अणुमात्र बिना दुःख –सुख है देखा,
लिंग संगि होने के कारण।
ऐसे लिंग संग से अखंड सुखी खुद होना चाहिए तो
पिंडादि ज्ञान शून्यांत हुआ एक सौ एक स्थल कुल
करतलामलक बने जाने,
ऊपर के ज्ञान शून्य स्थल में खडे ,
पिंडादिज्ञान गुरुकरुण स्थल जैसे मार्ग बिना छूके
बोलचाल संपन्न बने निजाचरण में खडे
छ:रिपु,आष्टमद (सप्त) व्यसन जैसे माया पाशा पर्वत को
वज्रायुध बने खडे देखा हमारे शरण गण
ऐसे-कारण स्वरुप हुआ
चिद्धन लिंग बोल-चाल-स्थल – कुल अनुभाव सुख न पाये
शैव सब जड कर्मि ,
छ: वैरी, अष्टमद, सप्त व्यसन जैसे
मायापाश काल काम के दर्द से
गुहेश्वर लिंग के शरणों के मार्ग न जाने (बिगडे)
बिगडा यह लोक देखा सिद्धरामय्या।
Translated by: Eswara Sharma M and Govindarao B N