ವಚನ - 837     
 
ಅರಿವು ಉದಯವಾದಲ್ಲದೆ ಮರಹು ನಷ್ಟವಾಗದು. ಮರಹು ನಷ್ಟವಾದಲ್ಲದೆ ಅರಿವು ಸಯವಾಗದು. ಅರಿವು ಸಯವಾಗಿ ದೊರೆಕೊಂಡ ಬಳಿಕ ಗುರುವಾರು? ಲಿಂಗವಾರು? ಆವುದು ಘನ, ಆವುದು ಕಿರಿದು ಹೇಳಾ? ಗುಹೇಶ್ವರಲಿಂಗದಲ್ಲಿ ಅರಿದು ಮರೆದು ಉಪದೇಶವ ಹಡೆದಡೆ ಮುಂದೆ ನಿಜವೆಂತು ಸಾಧ್ಯವಪ್ಪುದು, ಹೇಳಾ ಮಡಿವಾಳ ಮಾಚಯ್ಯಾ?