ಆದಿ ಅನಾದಿಯೆಂಬುದ
ಅಂತರಾತ್ಮನಲ್ಲಿ ತಿಳಿಯಲರಿಯದೆ
ಆದಿ ದೈವವೆಂದು ಬರಿಯ
ಬಹಿರಂಗದ ಬಳಕೆಯನೆ ಬಳಸಿ,
ಅನ್ಯ ದೈವಂಗಳನಾರಾಧಿಸಿ
ಕೆಡುತ್ತಿಪ್ಪರು ನೋಡಾ.
ಅದಕೆ ತಪ್ಪೇನು,
ಮಕ್ಕಳಿಗೆ ತಮ್ಮ ಮಾತೆಯೇ ದೈವ.
ಮಾತೆಗೆ ತನ್ನ ಪುರುಷನೆ ದೈವ,
ಪುರುಷಂಗೆ ತನ್ನ ಪ್ರಭುವೆ ದೈವ.
ಪ್ರಭುವಿಗೆ ತನ್ನ ಪ್ರಧಾನನೆ ದೈವ,
ಪ್ರಧಾನಂಗೆ ತನ್ನ ರಾಯನೆ ದೈವ.
ರಾಯಂಗೆ ತನ್ನ ಲಕ್ಷ್ಮಿಯೆ ದೈವ,
ಲಕ್ಷ್ಮಿಗೆ ತನ್ನ ವಿಷ್ಣುವೆ ದೈವ.
ವಿಷ್ಣುವಿಗೆ ತನ್ನ ರುದ್ರನೆ ದೈವ,
ಆ ರುದ್ರಂಗೆ ತನ್ನ ಈಶ್ವರನೆ ದೈವ.
ಈಶ್ವರಂಗೆ ತನ್ನ ಸದಾಶಿವನೆ ದೈವ,
ಸದಾಶಿವಂಗೆ ತನ್ನ ಸರ್ವಗತ ಶಿವನೆ ದೈವ.
ಸರ್ವಗತ ಶಿವನಿಗೆ
ಆಕಾಶಮಹಿಪತಿಯೆಂಬ ಮಹಾಲಿಂಗಕ್ಕೆ
ಆದಿ ದೇವರುಳ್ಳಡೆ ಹೇಳಿರೆ,
ಇಲ್ಲದಿರ್ದಡೆ ಸುಮ್ಮನೆ ಇರಿರೆ.
ಇದು ಕಾರಣ ಷಡುದರುಶನದ
ಚರಾಚರಾದಿಗಳೆಲ್ಲರೂ
ತಮ ತಮಗಿಷ್ಟ ಕಾಮ್ಯವ ಕೊಡುವುದಕ್ಕೆ
ವರವುಳ್ಳ ದೇವರೆಂದು ಬೆರವುತ್ತಿಹರು.
ಅದಕ್ಕೆ ತಪ್ಪೇನು? ಅವರಿಗಪ್ಪಂಥ,
ವರವೀವುದಕ್ಕೆ ಸತ್ಯವುಳ್ಳವನಹುದು.
ಆದಡೇನು, ಪ್ರಾಣಕ್ಕೆ ಪರಿಣಾಮವ ಕೊಡಲರಿಯವು.
ಅವರ ಕೈಯಲ್ಲಿ ಆರಾಧಿಸಿಕೊಂಬ ದೈವಂಗಳೆಲ್ಲವು.
ಪೃಥ್ವಿ ಅಪ್ಪು ತೇಜ ವಾಯು
ಆಕಾಶ ಮನವೆಂಬಾರರ ಹಂಗಿನಲ್ಲಿ ಸಿಕ್ಕಿ,
ವಿಭೂತಿಯನ್ನಿಟ್ಟು, ರುದ್ರಾಕ್ಷೆಯಂ ತೊಟ್ಟು
ಜಪತಪ ಹೋಮ ನೇಮಂಗಳ ಮಾಡಿ
ಮಾರಣ ಮೋಹನ ಸ್ತಂಭನ ಉಚ್ಚಾಟನ
ಅಂಜನ ಸಿದ್ಧಿ, ಘುಟಿಕಾ ಸಿದ್ಧಿ, ಮಂತ್ರಸಿದ್ಧಿ, ದೂರದೃಷ್ಟಿ
ದೂರ ಶ್ರವಣ, ಕಮಲದರ್ಶನ,
ತ್ರಿಕಾಲಜ್ಞಾನ, ಪರಕಾಯಪ್ರವೇಶವೆಂಬ
ಅಷ್ಟಮಹಾಸಿದ್ಧಿಗಳಂ ಲಿಂಗದಲ್ಲಿ ವರಂಬಡೆದು
ತಮ್ಮ ಬೇಡಿದವರಿಗೆ ಕೊಟ್ಟು
ತಮ್ಮಿಂದ ಹಿರಿಯರಿಗೆ ನಮಸ್ಕರಿಸಿ,
ತಮ್ಮಿಂದ ಕಿರಿಯರಿಗೆ ದೇವರೆಂದು ಬೆರವುತ್ತಿಹರು.
ಕಿರಿದು ದಿನ ಅವರ ದೇವರೆನ್ನಬಹುದೆ?
ದೇಹಕೇಡಿಗಳ ಸತ್ಯರೆಂದೆನಬಹುದೆ?
ಅಸತ್ಯದಲ್ಲಿ ಅಳಿದವರ ಭಕ್ತರೆಂದೆನಬಹುದೆ?
ಬಹುರೂಪಿನ ಕಪಟಿಗಳ ನಿತ್ಯರೆನಬಹುದೆ?
ದಿನದಿನಕ್ಕೆ ಸತ್ತು ಸತ್ತು ಹುಟ್ಟುವವರ.
ಅದೆಂತೆಂದಡೆ:
ಬ್ರಹ್ಮನ ಜಾವವೊಂದಕ್ಕೆ ಒಬ್ಬ ಇಂದ್ರನಳಿವ,
ವಿಷ್ಣುವಿನ ಜಾವವೊಂದಕ್ಕೆ ಒಬ್ಬ ಬ್ರಹ್ಮನಳಿವ,
ರುದ್ರನ ಜಾವವೊಂದಕ್ಕೆ ಒಬ್ಬ ವಿಷ್ಣುವಳಿವ,
ಈಶ್ವರನ ಜಾವವೊಂದಕ್ಕೆ ಒಬ್ಬ ರುದ್ರನಳಿವ,
ಸದಾಶಿವನ ಜಾವವೊಂದಕ್ಕೆ ಒಬ್ಬ ಈಶ್ವರನಳಿವ,
ಸರ್ವಗತನ ಜಾವವೊಂದಕ್ಕೆ ಒಬ್ಬ ಸದಾಶಿವನಳಿವ,
ಲಿಂಗ ಶರಣರ ಒಂದು ನಿಮಿಷಕ್ಕೆ ಒಬ್ಬ ಸರ್ವಗತನಳಿವ,
ಲಿಂಗ ಶರಣರಿಗೆ ಅಳಿವುಳ್ಳಡೆ ಹೇಳಿರೆ?
ಇಲ್ಲದಿರ್ದಡೆ ಸುಮ್ಮನಿರಿರೆ.
ಅಂತಪ್ಪ ಮಹಾಲಿಂಗವನು
ಶರಣರನು ಅರಿಯದೆ
ಷಡುದೇವತೆಗಳು ಮುಖ್ಯವಾದ
ಮನು ಮುನಿ ದೇವ ದಾನವ
ಮಾನವರೆಲ್ಲರೂ ಆರಿಸಿ ತೊಳಲಿ
ಬಳಲುತ್ತಿಪ್ಪರು. ಅದು ಹೇಗೆಂದಡೆ:
ಬ್ರಹ್ಮವೇದದಲ್ಲರಸುವನು.
ವಿಷ್ಣು ಪೂಜೆಯಲ್ಲರಸುವನು.
ರುದ್ರ ಜಪದಲ್ಲರಸುವನು.
ಈಶ್ವರ ನಿತ್ಯನೇಮದಲ್ಲರಸುವನು.
ಸದಾಶಿವನು ನಿತ್ಯ ಉಪಚಾರದಲ್ಲರಸುವನು.
ಸರ್ವಗತ ಶೂನ್ಯದಲ್ಲರಸುವನು.
ಗೌರಿ ತಪದಲ್ಲರಸುವಳು,
ಗಂಗೆ ಉಗ್ರದಲ್ಲರಸುವಳು.
ಚಂದ್ರ ಸೂರ್ಯರು ಹರಿದರಸುವರು.
ಇಂದ್ರ ಮೊದಲಾದಷ್ಟದಿಕ್ಪಾಲಕರು
ಆಗಮ್ಯದಲ್ಲರಸುವರು
ಸಪ್ತ ಮಾತೃಕೆಯರು `ಓಂ ಫಟ್ ಸ್ವಾಹಾ'
ಎಂಬ ಮಂತ್ರದಲ್ಲರಸುವರು.
ಸತ್ಯಋಷಿ ದಧೀಚಿ ಗೌತಮ ವಶಿಷ್ಠ
ವಾಲ್ಮೀಕಿ ಅಗಸ್ತ್ಯ ವಿಶ್ವಾಮಿತ್ರ
ಇವರು ಮೊದಲಾದ ಸಪ್ತಋಷಿಯರುಗಳೆಲ್ಲಾ
ತಪ, ಯೋಗ, ಆಗಮಂಗಳಲ್ಲಿ ಅರಸುವರು.
ಇಂತಿವರೆಲ್ಲರಿಗೆಯೂ ಸಿಕ್ಕಿಯೂ ಸಿಕ್ಕದ ಘನವು
ಶುಕ್ಲ ಶೋಣಿತವಿಲ್ಲದ ಕಾಮಿ,
ಒಡಲಿಲ್ಲದ ರೂಪು,
ತಲೆಯಿಲ್ಲದ ಗಜ, ಬಾಲವಿಲ್ಲದ ಸಿಂಹ,
ನಿದ್ರೆಯಿಲ್ಲದ ನಿರಾಳ.
ಇಂತೀ ಭೇದಮಂ ಭೇದಿಸಿ ನೋಡಬಲ್ಲಡೆ
ಕಣ್ಣ ಮೇಲೆ ಕಣ್ಣುಂಟು.
ಮತ್ತಾ ಕಣ್ಣ ತೆರೆದು ಅಮೃತಕಾಯದೃಷ್ಟಿಯಲ್ಲಿ
ನೋಡಿದಡೊಂದೂಯಿಲ್ಲ.
ನಮ್ಮ ಗುಹೇಶ್ವರ ಲಿಂಗವು
ಬಚ್ಚಬರಿಯ ಬಯಲು ನಿಶ್ಚಿಂತ ನಿರಾಳನು.
Transliteration Ādi anādiyembuda
antarātmanalli tiḷiyalariyade
ādi daivavendu bariya
bahiraṅgada baḷakeyane baḷasi,
an'ya daivaṅgaḷanārādhisi
keḍuttipparu nōḍā.
Adake tappēnu,
makkaḷige tam'ma māteyē daiva.
Mātege tanna puruṣane daiva,
puruṣaṅge tanna prabhuve daiva.
Prabhuvige tanna pradhānane daiva,
pradhānaṅge tanna rāyane daiva.
Rāyaṅge tanna lakṣmiye daiva,
lakṣmige tanna viṣṇuve daiva.
Viṣṇuvige tanna rudrane daiva,
ā rudraṅge tanna īśvarane daiva.
Īśvaraṅge tanna sadāśivane daiva,
sadāśivaṅge tanna sarvagata śivane daiva.
Sarvagata śivanige
ākāśamahipatiyemba mahāliṅgakke
ādi dēvaruḷḷaḍe hēḷire,
illadirdaḍe sum'mane irire.
Idu kāraṇa ṣaḍudaruśanada
carācarādigaḷellarū
tama tamagiṣṭa kāmyava koḍuvudakke
varavuḷḷa dēvarendu beravuttiharu.
Adakke tappēnu? Avarigappantha,
varavīvudakke satyavuḷḷavanahudu.Ādaḍēnu, prāṇakke pariṇāmava koḍalariyavu.
Avara kaiyalli ārādhisikomba daivaṅgaḷellavu.
Pr̥thvi appu tēja vāyu
ākāśa manavembārara haṅginalli sikki,
vibhūtiyanniṭṭu, rudrākṣeyaṁ toṭṭu
japatapa hōma nēmaṅgaḷa māḍi
māraṇa mōhana stambhana uccāṭana
an̄jana sid'dhi, ghuṭikā sid'dhi, mantrasid'dhi, dūradr̥ṣṭi
dūra śravaṇa, kamaladarśana,
trikālajñāna, parakāyapravēśavemba
aṣṭamahāsid'dhigaḷaṁ liṅgadalli varambaḍedu
tam'ma bēḍidavarige koṭṭu
tam'minda hiriyarige namaskarisi,Tam'minda kiriyarige dēvarendu beravuttiharu.
Kiridu dina avara dēvarennabahude?
Dēhakēḍigaḷa satyarendenabahude?
Asatyadalli aḷidavara bhaktarendenabahude?
Bahurūpina kapaṭigaḷa nityarenabahude?
Dinadinakke sattu sattu huṭṭuvavara.
Adentendaḍe:Brahmana jāvavondakke obba indranaḷiva,
viṣṇuvina jāvavondakke obba brahmanaḷiva,
rudrana jāvavondakke obba viṣṇuvaḷiva,
īśvarana jāvavondakke obba rudranaḷiva,
sadāśivana jāvavondakke obba īśvaranaḷiva,
sarvagatana jāvavondakke obba sadāśivanaḷiva,
liṅga śaraṇara ondu nimiṣakke obba sarvagatanaḷiva,
liṅga śaraṇarige aḷivuḷḷaḍe hēḷire?
Illadirdaḍe sum'manirire.
Antappa mahāliṅgavanu
śaraṇaranu ariyadeṢaḍudēvategaḷu mukhyavāda
manu muni dēva dānava
mānavarellarū ārisi toḷali
baḷaluttipparu. Adu hēgendaḍe:
Brahmavēdadallarasuvanu.
Viṣṇu pūjeyallarasuvanu.
Rudra japadallarasuvanu.
Īśvara nityanēmadallarasuvanu.
Sadāśivanu nitya upacāradallarasuvanu.
Sarvagata śūn'yadallarasuvanu.
Gauri tapadallarasuvaḷu,
gaṅge ugradallarasuvaḷu.
Candra sūryaru haridarasuvaru.
Indra modalādaṣṭadikpālakaru
āgamyadallarasuvaru
Sapta mātr̥keyaru `ōṁ phaṭ svāhā'
emba mantradallarasuvaru.
Satya'r̥ṣi dadhīci gautama vaśiṣṭha
vālmīki agastya viśvāmitra
ivaru modalāda sapta'r̥ṣiyarugaḷellā
tapa, yōga, āgamaṅgaḷalli arasuvaru.
Intivarellarigeyū sikkiyū sikkada ghanavu
śukla śōṇitavillada kāmi,
oḍalillada rūpu,
taleyillada gaja, bālavillada sinha,
nidreyillada nirāḷa.
Intī bhēdamaṁ bhēdisi nōḍaballaḍe
kaṇṇa mēle kaṇṇuṇṭu.Mattā kaṇṇa teredu amr̥takāyadr̥ṣṭiyalli
nōḍidaḍondūyilla.
Nam'ma guhēśvara liṅgavu
baccabariya bayalu niścinta nirāḷanu.
Hindi Translation आदि अनादि जैसे अंतरात्मा में बिना जाने,
आदि दैव जैसे सिर्फ बहिरंग रीति उपयोग कर,
अन्य दैवों की आराधना कर बिगड़ रहे हैं देखा।
उसमें क्या गलती, बच्चों को अपनी माता ही दैव।
माता को अपना पुरुष ही दैव, पुरुष को अपना प्रभु ही दैव।
प्रभु कोअपना प्रधान ही दैव, प्रधान को अपना राजा ही दैव।
राजा को अपनी लक्ष्मी ही दैव ,लक्ष्मी को अपना विष्णु ही दैव।
विष्णु को अपना रुद्र ही दैव, उस रुद्र को अपना ईश्वर ही दैव।
ईश्वर को अपना सदाशिव ही दैव ,सदाशिव को अपना सर्वगत शिव ही दैव
सर्वगत शिव को आकाश महिपति जैसे महालिंग को
आदि दैव रहेतो कहिए; नहीं तो चुप रहिए।
इस कारण षड्दर्शन के चराचर ही सब
अपनी अपनी इच्छा काम्य देने को
वर रहे देव समझ माँग रहे हैं।
उस में गलत क्या उनके योग्य,
वर देने को सत्य रहा हुआ है।
फिरभी क्या, प्राण का परिणाम देना न जानते
उनके हाथ से आराधित सब दैव।
पृथ्वी, जल, तेज, वायु, आकाश ,जैसे छ: की परवाह में फॅंसे,
विभूति धारण रुद्राक्षी पहने
जब तप होम ने मों को कर
मारण, मोहन ,स्तंभन, उच्छाटना,
अंजनसिद्धि, घुटिकासिद्धि, मंत्रसिद्धि , दूरदृष्टि,
दूर श्रवण, कमल दर्शन, त्रिकाल ज्ञान,
परकाय प्रवेश, जैसे
अष्ट महासिद्धियों को लिंग में वर पाये
अपने से मांगनेवाले को दे, अपने बुजुर्गों को नमस्कार कर
अपने से छोटे को दैव कहते हैं।
दूसरे दिन दैव कह सकते?
दुष्टों को सत्य बने कह सकते ?
असत्य में मिठे को भक्त कह सकते?
बहुरूपी कपटियों को नित्य कह सकते?
रोज-रोज मरमर कर पैदा होनेवालों को
वह कैसे कहे तो_
ब्रह्म के एकपहर को एक इंद्र मरता,
विष्णु के एक पहर को एक ब्रह्म मरता,
रुद्र के एक पहर को एक विष्णु मरता,
ईश्वर के एक पहर को एक रुद्र मरता,
सदाशिव के एक पहर को एक ईश्वर मरता,
सर्वगत के एक पहर को एक सदाशिव मरता,
लिंग शरणों के एक निमिष को एक सर्वगत मरता।
लिंग शरणों को मृत्यु हो तो कहिए?
नहीं तो चुप रहिए।
ऐसे महालिंग के शरणों को बिना जाने
षड्देवता मुख्य हुए मनु मुनि, देव, दानव,
मानव सब टहलते तड़प रहे हैं।
वह कैसे कहे तो_
ब्रह्म वेद में ढूँढेगा।
विष्णु पूजा में ढूँढेगा।
रुद्र जप में ढूँढेगा।
ईश्वर नित्य नेम में ढूँढेगा।
सदाशिव नित्य उपचार में ढूँढेगा।
सर्वगत शून्य में ढूँढेगा।
गौरी तप में ढूँढेगी, गंगा क्रोध में ढूँढेगी।
चंद्र सूर्य चाल में ढूँढेंगे।
इंद्र आदि अष्टदिक्पालक आगम में ढूँढेंगे।
सप्तमात्रुकाऍं "ऊँपटुस्वाहा" जैसे मंत्र में ढूंढ़ेंगी।
सत्यऋषि, दधीचि, गौतम, वशिष्ट, वाल्मीकि, अगस्त्य,
विश्वामित्र आदि सप्तऋषि गण
तप योग आगम, में ढूँढ़ेंगे।
इन सब को मिले न मिले घन
शुक्ल, शोणित बिना कामी, बिनादेह रुप,
बिना शिर गज, बिना पूँछ सिंह ,बिना नींद निराळ।
ऐसे भेदों के भेदकर देख सके तो ऑंख पर ऑंख है।
फिर उस ऑंख खोल
अमृत काय दृष्टि में देखे तो एक भी नहीं।
हमारे गुहेश्वरलिंग पूरी तरह शून्य निश्चिंत निराळ।
Translated by: Eswara Sharma M and Govindarao B N