•  
  •  
  •  
  •  
Index   ವಚನ - 890    Search  
 
ಆದಿಯ ಲಿಂಗವ ತೋರಿದ ಅನಿಮಿಷನ ಕಂಡೆನಯ್ಯಾ ಇಂದು. ಕೃತಯುಗದ ಸ್ಕಂದನೆಂಬ ಗಣೇಶ್ವರನ ಕಂಡೆನಯ್ಯಾ ಇಂದು. ತ್ರೇತಾಯುಗದ ನೀಲಲೋಹಿತನೆಂಬ ಗಣೇಶ್ವರನ ಕಂಡೆನಯ್ಯಾ ಇಂದು. ದ್ವಾಪರಯುಗದ ವೃಷಭನೆಂಬ ಗಣೇಶ್ವರನ ಕಂಡೆನಯ್ಯಾ ಇಂದು. ಕಲಿಯುಗದಲ್ಲಿ ಅನಿಮಿಷಬಸವನೆಂಬ ಗಣೇಶ್ವರನ ಕಂಡೆನಯ್ಯಾ ಇಂದು. ಎನ್ನ ಕಂಡವರನೂ, ನಿನ್ನ ಕಂಡವರನೂ, ಇಂದು ಕಂಡೆ ಕಾಣಾ ಗುಹೇಶ್ವರಾ.
Transliteration Ādiya liṅgava tōrida animiṣana kaṇḍenayyā indu. Kr̥tayugada skandanemba gaṇēśvarana kaṇḍenayyā indu. Trētāyugada nīlalōhitanemba gaṇēśvarana kaṇḍenayyā indu. Dvāparayugada vr̥ṣabhanemba gaṇēśvarana kaṇḍenayyā indu. Kaliyugadalli animiṣabasavanemba gaṇēśvarana kaṇḍenayyā indu. Enna kaṇḍavaranū, ninna kaṇḍavaranū, indu kaṇḍe kāṇā guhēśvarā.
Hindi Translation आदि लिंग दिखाये अनिमिष को देखा अय्या आज। कृतयुग का स्कंद जैसे गणेश्वर को देखा अय्या आज। त्रेतायुग का नीललोहित जैसे गणेश्वर को देखा अय्या आज। द्वापरयुग का वृषभ जैसे गणेश्वर को देखा अय्या आज। कलियुग में अनिमिष बसव जैसे गणेश्वर को देखा अय्या आज। मुझे देखे, तुझे देखे, आज देखा देखा गुहेश्वरा। Translated by: Eswara Sharma M and Govindarao B N