•  
  •  
  •  
  •  
Index   ವಚನ - 889    Search  
 
ಆದಿಯ ಲಿಂಗ ನಿನ್ನಿಂದ ಎನಗಾಯಿತ್ತು ಬಸವಣ್ಣಾ. ಅನಾದಿಯ ಜ್ಞಾನ ಜಂಗಮ ನಿಮ್ಮ ನೆನೆದಡೆ ಎನಗೆ ಸಾಧ್ಯವಾಯಿತ್ತು ಬಸವಣ್ಣಾ. ನಿನ್ನ ಕೃಪೆಯಿಂದ ಸರ್ವಾಂಗಲಿಂಗಿಯಾದೆ ಬಸವಣ್ಣಾ. ನಿನ್ನ ಕೃಪೆಯಿಂದ ಪ್ರಾಣ ಲಿಂಗವೆಂದರಿದೆನೆಂಬುದ, ನಿಮ್ಮ ಪ್ರಮಥರೆ ಬಲ್ಲರು. ಗುಹೇಶ್ವರ ಸಾಕ್ಷಿಯಾಗಿ, ಸಂಗನಬಸವಣ್ಣಾ ನಿನ್ನ ಪ್ರಸಾದದ ಶಿಶು ನಾನು ನೋಡಯ್ಯಾ.
Transliteration Ādiya liṅga ninninda enagāyittu basavaṇṇā. Anādiya jñāna jaṅgama nim'ma nenedaḍe enage sādhyavāyittu basavaṇṇā. Ninna kr̥peyinda sarvāṅgaliṅgiyāde basavaṇṇā. Ninna kr̥peyinda prāṇa liṅgavendaridenembuda, nim'ma pramathare ballaru. Guhēśvara sākṣiyāgi, saṅganabasavaṇṇā ninna prasādada śiśu nānu nōḍayyā.
Hindi Translation आदि का लिंग तुमसे मेरा हुआ था बसवण्णा। अनादि का ज्ञान तेरे स्मरण से मेरा हुआ था। तेरी कृपा से प्राणलिंग जाने कहना, तुम्हारे प्रमथ जानते। गुहेश्वर साक्षी बने, संगनबसवण्णा तेरे प्रसाद का शिशु मैं देखा अय्या। Translated by: Eswara Sharma M and Govindarao B N