•  
  •  
  •  
  •  
Index   ವಚನ - 899    Search  
 
ಆದಿಶಕ್ತಿ ಅನಾದಿಶಕ್ತಿಯೆಂಬರು ಅದನಾರು ಬಲ್ಲರಯ್ಯಾ? `ಆದಿ' ಎಂದಡೆ ಕುರುಹಿಂಗೆ ಬಂದಿತ್ತು. `ಅನಾದಿ' ಎಂದಡೆ ನಾಮಕ್ಕೆ ಬಂದಿತ್ತು. ಆದಿಯೂ ಅಲ್ಲ ಅನಾದಿಯೂ ಅಲ್ಲ, ನಾಮವಿಲ್ಲದ ಸೀಮೆಯಿಲ್ಲದ ನಿಜಭಕ್ತಿಯೆ ಚಿಚ್ಛಕ್ತಿಯಾಯಿತ್ತು ನೋಡಾ. ಅಂತರಂಗದ ಪ್ರಭೆ ಬಹಿರಂಗವೆಲ್ಲಾ ತಾನೆಯಾಗಿ ಗುಹೇಶ್ವರಲಿಂಗದಲ್ಲಿ ಸಂದಿಲ್ಲದಿಪ್ಪ ಮಹಾದೇವಿಯಕ್ಕನ ಶ್ರೀಪಾದಕ್ಕೆ ನಮೋ ನಮೋ ಎಂಬೆನು.
Transliteration Ādiśakti anādiśaktiyembaru adanāru ballarayyā? `Ādi' endaḍe kuruhiṅge bandittu. `Anādi' endaḍe nāmakke bandittu. Ādiyū alla anādiyū alla, nāmavillada sīmeyillada nijabhaktiye cicchaktiyāyittu nōḍā. Antaraṅgada prabhe bahiraṅgavellā tāneyāgi guhēśvaraliṅgadalli sandilladippa mahādēviyakkana śrīpādakke namō namō embenu.
Hindi Translation आदिशक्ति अनादिशक्ति कहेंगे उसे कौन जानता अय्या ? आदि कहें तो चिह्न को आया था। अनादि कहें तो नाम को आया था। आदि भी नहीं, अनादि भी नहीं, बिना नाम बिना सीमा निजभक्ति ही आत्म शक्ति हुई हैदेखा। अंतरंग की प्रभा सब बहिरंग खुद बने गुहेश्वर लिंग में बिना जोडे रही महादेवी अक्का के श्रीपाद को नमो नमो कहूँगा । Translated by: Eswara Sharma M and Govindarao B N