ಆಚಾರವರಿಯದೆ, ಕ್ರಿಯಾಚಾರ ಉಡುಗದೆ, ವಿಭವವಳಿಯದೆ,
ಕೋಪವಡಗದೆ, ತಾಪ ಮುರಿಯದೆ,
ಬರಿದೆ ಭಕ್ತರಾದೆವೆಂದು ಬಿಬ್ಬನೆ ಬಿರಿಯುವ ಕೇಡಿಂಗೆ
ನಾನು ಬೆರಗಾದೆ ಕಾಣಾ ಗುಹೇಶ್ವರಾ.
Transliteration Ācāravariyade, kriyācāra uḍugade, vibhavavaḷiyade,
kōpavaḍagade, tāpa muriyade,
baride bhaktarādevendu bibbane biriyuva kēḍiṅge
nānu beragāde kāṇā guhēśvarā.
Hindi Translation आचार न जानकर, विभव नाश न होते
क्रोध कम न होते, ताप नष्ट न होते,
सिर्फ भक्त बन गये गर्व से प्रदर्शन करनेवाले की हानी से
मैं व्याकुल होता हूँ देखो गुहेश्वरा ।
Translated by: Eswara Sharma M and Govindarao B N
Tamil Translation ஆசாரத்தை அறியாது செல்வச் செருக்கை விடாமல்,
கோபம் அடங்காது, தாபம் அகலாமல்
தாங்களும் பக்தரென மருண்டு இறுமாப்பு எய்துவோர்
கேடுறுவர். அவர்களைக் கண்டு மறுகுகிறேன் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರಿಯುವುದು = ಅರಿತು ಆಚರಿಸುವುದು; ಆಚಾರ = ಸದಾಚಾರ; ತಾಪ = ಮಾನಸಿಕ ಅಸಮಾಧಾನ; ಬರಿದೆ = ಆ ಆಚಾರಾದಿಗಳನ್ನು ಅರಿಯದೆ; ಮುರಿ = ನಷ್ಟಗೊಳಿಸು; ವಿಭವ = ತನ್ನ ಒಡೆತನದಲ್ಲಿರುವ ಧನಧಾನ್ಯಾದಿ ಐಶ್ವರ್ಯ;
Written by: Sri Siddeswara Swamiji, Vijayapura