ಉಲುಹಿನ ವೃಕ್ಷದ ನೆಳಲಡಿಯಲಿರ್ದು,
ಗಲಭೆಯನೊಲ್ಲೆನೆಂಬುದೆಂತಯ್ಯಾ?
ಪಟ್ಟದರಾಣಿಯ ಮುಖವ ಮುದ್ರಿಸಿ,
ಮೆಟ್ಟಿ ನಡೆವ ಸತಿಯ ಶಿರವ,
ಮೆಟ್ಟಿ ನಿಲುವ ಪರಿಯೆಂತಯ್ಯಾ?
ಆದಿಯ ಹೆಂಡತಿಯನುಲ್ಲಂಘಿಸಿದ ಕಾರಣ,
ಮೇದಿನಿಯ ಮೇಲೆ ನಿಲಬಾರದು.
ಸಾಧಕರೆಲ್ಲರು ಮರುಳಾದುದ ಕಂಡು
ನಾಚಿ ನಗುತ್ತಿರ್ದೆನು ಗುಹೇಶ್ವರಾ.
Transliteration Uluhina vr̥kṣada neḷalaḍiyalirdu,
galabheyanollenembudentayyā?
Paṭṭadarāṇiya mukhava mudrisi, meṭṭi naḍeva satiya śirava,
meṭṭi niluva pariyentayyā?
Ādiya heṇḍatiyanullaṅghisida kāraṇa,
mēdiniya mēle nilabāradu.
Sādhakarellaru maruḷāduda kaṇḍu
nāci naguttirdenu guhēśvarā.
Hindi Translation हिलनेवाले पेड़ की छाया में रहकर
शोरगुल न चाहे तो यह रीती क्यों ?
पटरानी का मुँह चूमकर,
दबाकर चलना, सति के सिर पर दबाकर खड़े होने की रीती कैसी?
पुरातन पत्नी का उल्लंघन करने के कारण
धरती पर नहीं रहना चाहिए।
सब साधक उन्मत्त हुए देखकर
लज्जित होकर हँस रहा हूँ गुहेश्वरा।
Translated by: Eswara Sharma M and Govindarao B N
Tamil Translation சலசலக்கும் மரத்தின் நிழலில் அமர்ந்து
துயரத்தை விரும்பேன் எனின் எப்படி ஐயனே?
பட்டத்து ராணியின் முகத்தைத் துகைத்து,
மிதித்துச் செல்லும் அஞ்ஞானத்தின் தலையை மிதித்து,
நில்லும் முறை என்ன ஐயனே?
ஆதியின் மனைவியைக் களைந்து கொண்டதால்
உலகின் மீது நிலைத்திருக்கவியலுமோ?
சாதகரனைவரும் மருளுற்றதைக்கண்டு
வெட்கி நகைக்கிறேன் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಆಕೆಯ ಮುಖವ ಮುದ್ರಿಸಿ = ಆಕೆಯನ್ನು ಮುಖಭಂಗಗೊಳಿಸಿ ಮೀರಿನಿಲ್ಲುವುದು.; ಆದಿಯ ಹೆಂಡತಿ = ಆದಿತತ್ವ್ತದೊಡನಿರುವ ಶಕ್ತಿ, ಚಿಚ್ಚಕ್ತಿ, ಸ್ವಾತ್ಮಪ್ರಜ್ಞೆ; ಉಲುಹಿನ ವೃಕ್ಷ = ಗಾಳಿಗೆ ಹೊಯ್ದಾಡುತ್ತಿರುವ ಮರ, ಅಸ್ಥಿರವಾದ ಸಂಸಾರ; ಉಲ್ಲಂಘಿಸಿದ ಕಾರಣ = ಕಳೆದುಕೊಂಡ ಕಾರಣ; ಗಲಭೆ = ಗದ್ದಲ, ಅಸಂತೋಷ; ನೆಳಲು = ಆಶ್ರಯ; ಪಟ್ಟದರಾಣಿ = ಈ ಭವ್ಯವಾದ, ವೈವಿಧ್ಯಪೂರ್ಣವಾದ, ಕಾಲದಲ್ಲಿ ಚಂಚಲಿಸುವ ವಿಶ್ವದ ಒಡತಿ; ಮಾಯೆ.; ಮೇದಿನಿಯ ಮೇಲೆ = ಭಕ್ತಿ ಭೂಮಿಕೆಯ ಮೇಲೆ; ಶಿರವ ಮೆಟ್ಟಿ ನಿಲ್ಲು = ಆ ಅಜ್ಞಾನವನ್ನು ತೊಡೆದುಹಾಕಿ ನಿಲ್ಲುವುದು; ಸತಿ = ಜೀವಭಾವದ ಅನುಸಂಗಿಣಿ, ಅಜ್ಞಾನ, ಅವಿದ್ಯೆ;
Written by: Sri Siddeswara Swamiji, Vijayapura