Index   ವಚನ - 905    Search  
 
ಆಯತ ಸ್ವಾಯತ ಸನ್ನಿಹಿತನಾಗಿ, ಆರಾಧ್ಯಲಿಂಗದಲ್ಲಿ ಅನುಭಾವಿಯಾಗಿಪ್ಪನು ಬಸವಣ್ಣನು. ಜಂಗಮಲಿಂಗ ಪ್ರಾಣಿಯಾಗಿ ನಿಷ್ಪ್ರಾಣವಾಗಿಪ್ಪನು ಬಸವಣ್ಣನು. ಗುಹೇಶ್ವರಲಿಂಗದಲ್ಲಿ, ಸಂಗನಬಸವಣ್ಣನ ಆಚಾರದ ಪರಿ ನಿನಗಲ್ಲದೆ ಅರಿಯಬಾರದು. ಎನಗೊಮ್ಮೆ ತಿಳುಹಿಕೊಡ ಚೆನ್ನಬಸವಣ್ಣಾ.