ಆರು ಚಕ್ರದೊಳಗೆ ಆರುಭೂತಂಗಳೇರಿಪ್ಪವಯ್ಯಾ
ಅವರೊಳಗೆ ಬ್ರಹ್ಮ ವಿಷ್ಣು ರುದ್ರ ಈಶ್ವರ
ಸದಾಶಿವ ಆತ್ಮತತ್ತ್ವವೆಂಬ
ಆರು ಅಧಿದೇವತೆಗಳಿಪ್ಪವಯ್ಯಾ.
ಇಂತಪ್ಪ ಷಟ್ಕರ್ಮ ಸಾದಾಖ್ಯರ
ಹಾನಿ ಮಾಡಿ ದಾಟುವರನೆ ಭಕ್ತಜಂಗಮವೆಂಬೆನು
ಕಾಣಾ ಗುಹೇಶ್ವರಾ.
Hindi Translationछः चक्रों में छः भूत चढे हुए हैं
उनमें ब्रह्म विष्णु रुद्र ईश्वर सदाशिव आत्म तत्व जैसे
छः अधिदेवता हैं।
ऐसे षट्कर्म शिव साधना में रहनेवालों को
हानि पहुँचाकर पारकरनेवाले को भक्त जंगम कहूँगा
देखा गुहेश्वरा ।
Translated by: Eswara Sharma M and Govindarao B N