Index   ವಚನ - 946    Search  
 
ಇಹವ ತೋರಿದನು ಶ್ರೀಗುರು, ಪರವ ತೋರಿದನು ಶ್ರೀಗುರು. ಎನ್ನ ತೋರಿದನು ಶ್ರೀಗುರು, ತನ್ನ ತೋರಿದನು ಶ್ರೀಗುರು. ಗುರು ತೋರಿದಡೆ ಕಂಡೆನು ಸಕಲ ನಿಷ್ಕಲವೆಲ್ಲವ. ಗುರು ತೋರಿದಡೆ ಕಂಡೆನು ಗುರುಲಿಂಗಜಂಗಮ ಒಂದೆ ಎಂದು. ತೋರಿ ಕರಸ್ಥಲದಲ್ಲಿದ್ದನು ಗುಹೇಶ್ವರಲಿಂಗನು.