ಉಚ್ಛಿಷ್ಟಕಾಯ ಚಾಂಡಾಲದೊಳಗೆ ಜನಿಸಿದ
ಹದಿನಾಲ್ಕು ಭುವನದೊಳಗೆಲ್ಲಾ,
`ನಾವು ಬಲ್ಲೆವು, ನಾವು ಹಿರಿಯರು,
ನಾವು ಘನಮಹಿಮರು' ಎಂಬರೆಲ್ಲಾ
ಮತ್ತೆ ಸಾವರೆ, ಇದೇನೊ ಇದೆಂತೊ?
ಗುಹೇಶ್ವರನೊಬ್ಬ ತಪ್ಪಿಸಿ ಮಿಕ್ಕಾದವರೆಲ್ಲ
ಪ್ರಳಯಕ್ಕೆ ಒಳಗು!
Transliteration Ucchiṣṭakāya cāṇḍāladoḷage janisida
hadinālku bhuvanadoḷagellā,
`nāvu ballevu, nāvu hiriyaru,
nāvu ghanamahimaru' embarellā
matte sāvare, idēno idento?
Guhēśvaranobba tappisi mikkādavarella
praḷayakke oḷagu!
Hindi Translation उच्छिष्ट काय चांडाल में पैदा हुआ
चौदह भुवनों में,
हम जानते, हम बड़े, हम घन महिमा कहनेवाले
फिर न मरेंगे। यह क्या,यह कैसा ?
अकेले गुहेश्वर को छोड ।
बाकी सब नाश होनेवाले हैं।
Translated by: Eswara Sharma M and Govindarao B N