Index   ವಚನ - 952    Search  
 
ಉದಕದೊಳಗಣ ಕಿಚ್ಚು ನನೆಯಿತ್ತು, ಕಿಚ್ಚಿನೊಳಗಣ ತೇಜ ಬೆಂದಿತ್ತು, ತಿಳಿದು ನೋಡಾ. ಅದೇನೊ ಅದೆಂತೊ? ಸಂಬಂಧಿಗಳು ತಿಳಿಯರು ನೋಡಾ. ಬೆಳಗಿನೊಳಗಣ ಕತ್ತಲೆಯಡಗಿತ್ತು, ಗುಹೇಶ್ವರನೆಂಬುದು ಅಲ್ಲಿಯೆ ಲಿಂಗೈಕ್ಯವು.