Index   ವಚನ - 955    Search  
 
ಉದಮದದ ಯೌವನವನೊಳಕೊಂಡ ಸತಿ, ನೀನು ಇತ್ತಲೇಕೆ ಬಂದೆಯವ್ವಾ? ಸತಿ ಎಂದಡೆ ಮುನಿವರು ನಮ್ಮ ಶರಣರು. ನಿನ್ನ ಪತಿಯ ಕುರುಹ ಹೇಳಿದಡೆ ಬಂದು ಕುಳ್ಳಿರು, ಅಲ್ಲದಡೆ ತೊಲಗು ತಾಯೆ. ನಮ್ಮ ಗುಹೇಶ್ವರನ ಶರಣರಲ್ಲಿ ಸಂಗಸುಖಸನ್ನಿಹಿತವ ಬಯಸುವಡೆ ನಿನ್ನ ಪತಿ ಯಾರೆಂಬುದ ಹೇಳಾ ಎಲೆ ಅವ್ವಾ?