ಎರಡು ನೇತ್ರ ಒಂದಾದ ಭಾಳನೇತ್ರವು
ಇಷ್ಟಲಿಂಗದ ಗೋಳಕಕ್ಕೆ ಕೂಟವು.
ಒಂದು ಲಿಂಗ ಎರಡಾದುದೆ ಇಷ್ಟ ಪ್ರಾಣಲಿಂಗವು.
ಆ ಪ್ರಾಣಲಿಂಗದ ಹಸ್ತಂಗಳಿಗೆರಡು ನೇತ್ರಂಗಳೆ ಕುಚಂಗಳು,
ಆ ಕುಚಂಗಳು ಹಿಡಿಯಲಿಕೆ,
ಈ ಕುಚವೆರಡು ಗುಹ್ಯ ಒಂದು
ಕೂಡಿ ತ್ರಿಕೂಟವೆಂಬ ಹೆಸರಾಯಿತ್ತು.
ಆ ತ್ರಿಕೂಟವೆಂಬ ಶಾಂಭವಪುರದ ಮಧ್ಯದಲ್ಲಿ
ಜ್ಯೋತಿರ್ಲಿಂಗವೇಕವಾದ ಬಳಿಕ,
ತನುತ್ರಯದ ವಿಕಾರವ ಹೊದ್ದಲಾಗದು.
ವಿಕಾರವ ಹೊದ್ದಿದರೆ ಮೀಸಲೋಗರವ
ಶುನಿಮುಟ್ಟಿದಂತಾಯಿತ್ತು.
ಆ ಜೀವಾತ್ಮಪದಾರ್ಥವು ಲಿಂಗಕ್ಕೆ ಸಲ್ಲದು,
ಅವರ ತೆರನೆಂತಾಯಿತ್ತೆಂದಡೆ,
ಜನ್ಮದಾರಿದ್ರನು ನಿಕ್ಷೇಪವಂ ಕಂಡು ಹೋಗಲಾಗಿ
ದಿಗಿಲುಬಿದ್ದು ಸತ್ತಂತಾಯಿತ್ತು.
ಅಂಥ ನಿರ್ಭಾಗ್ಯ ದುರ್ಮರಣನ ಕಂಡು ಹೇಸಿ,
ತಮ್ಮ ತನುತ್ರಯವಿಕಾರಮಂ ಪೊರ್ದದೆ,
ಲಿಂಗ ನಿಕ್ಷೇಪದಲ್ಲಿ ನಿರಂಗವಾಗಿ,
ಮನ್ಮಥರತಿಯೆಂಬ ನರಕವ ಬೀಳದೆ,
ಅಕ್ಷಯಸುಖಿಗಳಾದರು ನೋಡಾ
ಗುಹೇಶ್ವರಲಿಂಗದಲ್ಲಿ.
Hindi Translationदो नेत्र एक हुआ फालनेत्र इष्टलिंग गोलक में मिले ,
एक लिंग दो हुए ही इष्ट प्राणलिंग ।
उस प्राणलिंग के हस्तों को दो नेत्र ही कुच ;
उन कुचों को पकडे,
ये दो कुच एक गुह्य मिले त्रिकूट जैसा नाम हुआ था ।
उस त्रिकूट जैसे शांभव पुर के बीच में
ज्योतिर्लिंग एक होने के बाद,
तनुत्रय का विकार न ओड सकता ।
विकार ओडे तो नैवेद्य को श्वान छूने जैसा हुआ था ।
वह जीवात्मा पदार्थ लिंग का उचित नहीं ,
उनकी रीति कैसी हुई कहें तो
जन्म दारिद्र निक्षेप देख जाकर घबराये मरे जैसा हुआ था।
ऐसा निर्भाग्य दुर्मरण देखे घृणा से,
अपने तनुत्रय बिना विकार हुए
लिंग निक्षेप में निरंग होकर, मन्मथ रति जैसे नरक मे न गिरे,
अक्षय सुखी बने देख गुहेश्वर लिंग में।
Translated by: Eswara Sharma M and Govindarao B N
English Translation
Tamil TranslationTranslated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶಬ್ದಾರ್ಥಗಳುWritten by: Sri Siddeswara Swamiji, Vijayapura