Index   ವಚನ - 3    Search  
 
ನಿತ್ಯ ಕೇಡಿಲ್ಲದಂತ ನಿರೂಪಿಸಲ್ಬಾರದಂಥ, ನಿರಾಕಾರ ಆಕಾರ ರಹಿತಮಾದಂಥ, ನಿರ್ನಾಮ ಹೆಸರಿಲ್ಲದಂಥ, ನಿರಂಜನ ಅಜ್ಞಾನ ಕಾಳಿಕೆ ಹೊದದಂಥ, ನಿಸ್ಸಂಗಿ ಚಿಚ್ಛಕ್ತಿ ಸಮ್ಮೇಳವಿಲ್ಲದಂಥ, ನಿರ್ನಾಮ ಹೆಸರಿಲ್ಲದಂಥ, ನಿರೂಪಕರ ಚರಣಾವಯವರಹಿತಮಾದಂಥ, ನಿರ್ಲೇಪ ಮಾಯಾಪ್ರಪಂಚು ಸೋಂಕಿಲ್ಲದಂಥ, ಶೂನ್ಯ ಕುರುಹುಗಾಣಿಸದಂಥ, ನಿಮಿತ್ತ ಪ್ರಪಂಚಿಗೆ ಕಾರಣಮಾದಂಥ, ಅಖಂಡ ಸರ್ವವು ಪರಿಪೂರ್ಣಮಾದಂಥ, ಅದ್ವಯ ತಾನೊಂದಲ್ಲದೆ ಎರಡಿಲ್ಲದಂಥ, ಪರಕೆ ಪರವಿನಿಂದತ್ತತ್ತಣ ನಿರ್ಗುಣ ಪರಬ್ರಹ್ಮವು ತನ್ನ ಸ್ವಲೀಲಾನಂದ ಪರಿಪೂರ್ಣ ಸಂತುಷ್ಟಿಯಿಂದೆ ಬೆರಗುವಡೆದು, ಸುಷುಪ್ತಿಯನೈದಿ ಬಯಲು ಬಯಲಾದಂತಿಹುದು. ಆ ಶೂನ್ಯಾನಂದಪೂರ್ಣವಹ ಕಾಲಕ್ಕೆ ಆ ಬ್ರಹ್ಮದ ಚೈತನ್ಯಜ್ಞಾನಪ್ರಭಾ ಸಾಮರ್ಥ್ಯದ ಬೆಳಗೇ ಬೀಜದೊಳಗಣ ವೃಕ್ಷದಂತಿರ್ದು ನನೆಯೊಳಗಣ ಪರಿಮಳ ಬಲಿದು ಬಿಂದು ನುಂಗಿದಂತೆ, ಸುಷುಪ್ತಿಯನೈದಿದ ನಿರ್ಗುಣಬ್ರಹ್ಮಕ್ಕೆ ಚಿತ್ತು ಪ್ರಸನ್ನತೆಯಾಯಿತ್ತು. ಆ ಚಿತ್ತೇ ಜ್ಞಾನಶಕ್ತಿಯೆನಿಸಿತ್ತು. ಅದರಿಂ ಸ್ವಪ್ನಾವಸ್ಥೆಯ ಆರುಹಿನಂತಾಗೆ ಹಕಾರ ಪ್ರಣವೋತ್ಪತ್ಯಮಾದುದು. ಆ ಹಕಾರ ಪ್ರಣಮವೆ ಭ್ರಮರ ಝೇಂಕಾರದಂತೆ ಓಂಕಾರನಾದವಾಯಿತ್ತು. ಆ ಓಂಕಾರನಾದವೆಂಬ ಮಂತ್ರಲಿಂಗದಿಂದ ಅಕಾರ ಉಕಾರ ಮಕಾರವೆಂಬ ಪ್ರಣವಬೀಜಾಕ್ಷರಂಗಳುತ್ಪತ್ಯವಾದವು. ಆ ಅಕಾರವೆಂಬ ಬ್ರಹ್ಮಕ್ಕೆ ಉಕಾರವೆಂಬ ಚಿತ್ಪ್ರಣವೆ ಅಂಗಮಾಗೆ, ಮ ಕಾರ ಪ್ರಣಮ ಕಲೆ ಸಂಧಿಸಲು, ಅಖಂಡಗೋಳಕಾಕಾರ ತೇಜೋಮೂರ್ತಿಯಾಗಿ, ಸತ್ವ ರಜತಮವೆಂಬ ಗುಣತ್ರಯಮಂ ನಿವೃತ್ತಿ ಪ್ರತಿಷ್ಠೆ ವಿದ್ಯೆ ಶಾಂತಿ ಶಾಂತ್ಯತೀತ ಶಾಂತ್ಯತೀತೋತ್ತರೆ ಎಂಬಾರು ಕಲಾಶಕ್ತಿಗಳು ಕರ್ತೃಸಾದಾಖ್ಯ ಮಹಾಸಾದಾಖ್ಯಗಳೆಂಬ ಷಟ್ಸಾದಾಖ್ಯಗಳಮಂ ಪೃಥ್ವಿ ಅಪ್ಪು ತೇಜ ವಾಯು ಆಕಾಶ ಮೊದಲಾದ ಪಂಚಭೂತಂಗಳುಮಂ, ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂಬ ಪಂಚವಾಯುಮಂ ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂಬೈದು ಜ್ಞಾನೇಂದ್ರಿಯಮಂ ಶಬ್ದ ಸ್ಪರ್ಶ ರೂಪ ಗಂಧವೆಂಬೈದು ವಿಷಯಮಂ ವಾಕು ಪಾಣಿ ಪಾದ ಗುಹ್ಯ ವಾಯುವೆಂಬೈದು ಕರ್ಮೇಂದ್ರಿಯಮಂ ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರವೆಂಬೈದು ಕರಣಮಂ ಸಾಮವೇದ ಋಗ್ವೇದ ಯಜುರ್ವೇದ ಅಥರ್ವಣವೆಂಬ ನಾಲ್ಕು ವೇದಮಂ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯವೆಂಬಾರು ಸ್ಥಲಮಂ ಪಂಚಭೂತಂಗಳಿಂದಾದ ಬ್ರಹ್ಮಾಂಡಾದಿ ಸ್ವರ್ಗ ಮರ್ತ್ಯ ಪಾತಾಳ ಮೊದಲಾದ ಅನಂತ ಲೋಕಂಗಳಲ್ಲಿ ಉತ್ಪತ್ತಿ ಸ್ಥಿತಿ ಲಯ ಕರ್ತೃಗಳಿಂದಾದ ಅಂಡಜ ಸ್ವೇದಜ ಉದ್ಧಿಜ ಜರಾಯುಜ ಮಂತ್ರಜ ಎಂಬೈದು ತೆರದುತ್ಪತ್ಯಮಂ ಸಮಸ್ತ ಸ್ಥಾವರಜಂಗಮಂಗಳ ಜನನ ಮರಣ ಪುಣ್ಯ ಪಾಪ ಸ್ವರ್ಗ ನರಕಂಗಳು ಇವು ಮೊದಲಾದ ಅನೇಕವೆಲ್ಲವು ಚಿತ್ರಿಕನ ಊಹೆ ಚಿತ್ರಿಕನ ಭಾವದಲ್ಲಿ ಅಡಗಿದಂತೆ ಸರ್ವವಿಶ್ವವೆಲ್ಲಮುಂ ತನ್ನ ಲೀಲೆಗುಂಟೆನಿಸಿ ಏಕಮೇವಾದ್ವಿತೀಯಂ ಬ್ರಹ್ಮವೆ ಮಹಾಲಿಂಗವೆನಿಸಿತ್ತು. ಆ ಮಹಾಲಿಂಗದ ಕಾರಕದಲ್ಲಿ ನ ಕಾರ, ದಂಡದಲ್ಲಿ, ಮ ಕಾರ, ಕುಂಡಲಿಯಲ್ಲಿ ಶಿ ಕಾರ ಅರ್ಧಚಂದ್ರದಲ್ಲಿ ವ ಕಾರ, ದರ್ಪಣದಲ್ಲಿ ಯ ಕಾರ, ಆ ಮಹಾಲಿಂಗದ ಪ್ರಣವ ಪಂಚಾಕ್ಷರದ ಚಿತ್ಕಳೆಯೇ ಪಂಚಮುಖ, ದಶಪಂಚನೇತ್ರ, ದಶಭುಜ, ತನು ಏಕ, ದ್ವಿಪಾದದಿಂದೆ ಪ್ರಪಂಚಿಗೆ ಕಾರಣಮಾದ ಸದಾಶಿವಮೂರ್ತಿ ಎನಿಸಿತ್ತು. ಆ ಮೂರ್ತಿಯ ಮುಖಗಳಾವವೆಂದರೆ: ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ್ಯವೆಂಬೈದು ಮುಖಂಗಳು. ಆ ಮುಖಂಗಳಿಂದ ಪ್ರಪಂಚಿಗಾಲಯಮಾದ ಬ್ರಹ್ಮಾಂಡವ ರಚಿಸುವ ಕಾರಣ, ಐದು ಭೂತಂಗಳು ಹುಟ್ಟಿದವು, ಆ ಭೂತಂಗಳ ಗುಣಮಿಶ್ರ ಭೇದದಿಂದ ಪಂಚೀಕರಿಸಲು ಪಂಚವಿಂಶತಿತತ್ವಂಗಳಾದವು. ಅದೆಂತಾದವೆಂದರೆ: ಆಕಾಶವೆಂಬ ಭೂತದಿಂದ ಜ್ಞಾನ ಬುದ್ಧಿ ಮನ ಚಿತ್ತ ಅಹಂಕಾರವೆಂಬ ಪಂಚಕರಣಂಗಳು ಹುಟ್ಟಿದವು. ವಾಯುವೆಂಬ ಭೂತದಿಂದ ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂಬ ಪಂಚ ಪ್ರಾಣವಾಯುಗಳು ಹುಟ್ಟಿದವು. ಅಗ್ನಿಯೆಂಬ ಭೂತದಿಂದ ಶ್ರೋತ್ರ ಸ್ಪರ್ಸಕ್ಕೆ ನೇತ್ರ ಜಿಹ್ವೆ ಘ್ರಾಣವೆಂಬೈದು ಜ್ಞಾನೇಂದ್ರಿಯಂಗಳು ಪುಟ್ಟಿದವು. ಅಪ್ಪುವೆಂಬ ಭೂತದಿಂದ ಶಬ್ದ ಸ್ಪರ್ಶ ರೂಪು ರಸ ಗಂಧವೆಂಬೈದು ವಿಷಯಂಗಳು ಹುಟ್ಟಿದವು. ಆ ಕರ್ಮೇಂದ್ರಿಯಂಗಳ ವಿಷಯ ವಚನ ದಾನ ಗಮನ ಆನಂದ ವಿಸರ್ಜನ ಎಂಬೈದು ವಿಷಯಂಗಳು ಮತ್ತಮಾ ಭೂತಂಗಳ ಗುಣಧರ್ಮ ಕರ್ಮವರ್ಣಅಧಿದೇವತೆಗಳಾವವೆಂದರೆ: ಪೃಥ್ವಿಗೆ ಶಬ್ದ ಸ್ಪರ್ಶ ರೂಪು ರಸ ಗಂಧ ಈ ಐದು ಗುಣ. ಕಠಿಣತ್ವವೆ ಧರ್ಮ, ಧಾರಣಾದಿ ಕರ್ಮ, ತದಂಗ ಪೀತವರ್ಣ ಅಧಿದೇವತೆ ಬ್ರಹ್ಮ. ಅಪ್ಪುವಿಂಗೆ ಶಬ್ದ ಸ್ಪರ್ಶ ರೂಪು ರಸ ಈ ನಾಲ್ಕು ಗುಣ. ದ್ರವಿಸೂದೆ ಧರ್ಮ, ಪಿಂಡಿ ಕರಣ ಕರ್ಮ, ತದಂಗ, ಶ್ವೇತವರ್ಣ, ಅಧಿದೇವತೆ ವಿಷ್ಣು. ಅಗ್ನಿಗೆ ಶಬ್ದ ಸ್ಪರ್ಶ ರೂಪ ಈ ಮೂರು ಗುಣ. ಉಷ್ಟಿಸುವುದೆ ಧರ್ಮ, ವಚನಾದಿ ಕರ್ಮ, ತದಂಗ ರಕ್ತವರ್ಣ, ಅಧಿದೇವತೆ ರುದ್ರನು. ವಾಯುವಿಂಗೆ ಶಬ್ದ ಸ್ಪರ್ಶ ಎರಡು ಗುಣ, ಚಲಿಸುವುದೆ ಧರ್ಮ, ವ್ಯಹನಾದಿ ಕರ್ಮ, ತದಂಗ ಹರೀತ ವರ್ಣ, ಅಧಿದೇವತೆ ಈಶ್ವರನು. ಆಕಾಶಕ್ಕೆ ಶಬ್ದವೊಂದೆ ಗುಣ, ಬಯಾಲಗಿಹುದೆ ಧರ್ಮ, ಸುಳಿವುದಕ್ಕೆ ತೆರಹುಗೊಡುವುದೆ ಕರ್ಮ, ತದಂಗ ಕೃಷ್ಣವರ್ಣ, ಅಧಿದೇವತೆ ಸದಾಶಿವನು. ಈ ಪಂಚಮಹಾಭೂತಂಗಳ ಪಂಚಾಂಶಿಕಭೇದಮಿಶ್ರದಿಂ ಪಂಚೀಕೃತಿಯನೈದು ದೇಹವಾಯಿತ್ತು, ಆ ಮಿಶ್ರವೆಂತೆಂದಡೆ: ಆಕಾಶದೊಂದಂಶ ವಿಜ್ಞಾನ, ಆಕಾಶದೊಂದಂಶ ವಾಯುವ ಕೂಡಲು ಮನಸ್ಸಾಯಿತು. ಆಕಾಶದೊಂದಂಶ ಅಗ್ನಿಯ ಕೂಡಲು ಬುದ್ದಿ ಎನಿಸಿತ್ತು. ಆಕಾಶದೊಂದಂಶ ಅಪ್ಪುವ ಕೂಡಲು ಚಿತ್ತವೆನಿಸಿತ್ತು. ಆಕಾಶದೊಂದಂಶ ಪೃಥ್ವಿಯ ಕೂಡಲು ಅಂಹಕಾರವೆನಿಸಿತ್ತು. ವಾಯುವಿನೊಂದಂಶ ಆಕಾಶವ ಕೂಡಲು ಸಮಾನವಾಯುವೆನಿಸಿತ್ತು. ವಾಯುವಿನೊಂದಂಶ ವಾಯುವಿನಲ್ಲಿ ಕೂಡಲು ಉದಾನವಾಯುವೆನಿಸಿತ್ತು. ವಾಯುವಿನೊಂದಂಶ ಅಗ್ನಿಯ ಕೂಡಲು ವ್ಯಾನವಾಯುವೆನಿಸಿತ್ತು. ವಾಯುವಿನೊಂದಂಶ ಅಪ್ಪುವ ಕೂಡಲು ಅಪಾನವಾಯುವೆನಿಸಿತ್ತು. ವಾಯುವಿನೊಂದಂಶ ಪೃಥ್ವಿಯ ಕೂಡಲು ಪ್ರಾಣವಾಯುವೆನಿಸಿತ್ತು. ಅಗ್ನಿಯದೊಂದಂಶ ಆಕಾಶವ ಕೂಡಲು ಪ್ರೋತ್ರವೆನಿಸಿತ್ತು. ಅಗ್ನಿಯದೊಂದಂಶ ವಾಯುವ ಕೂಡಲು ತ್ವಕ್ಕೆನಿಸಿತ್ತು. ಅಗ್ನಿಯದೊಂದಂಶ ಅಗ್ನಿಯಲ್ಲಿ ಕೂಡಲು ನೇತ್ರವೆನಿಸಿತ್ತು. ಅಗ್ನಿಯದೊಂದಂಶ ಅಪ್ಪುವಿನಲ್ಲಿ ಕೂಡಲು ಜಿಹ್ವೆಯೆನಿಸಿತ್ತು. ಅಗ್ನಿಯದೊಂದಂಶ ಪೃಥ್ವಿಯ ಕೂಡಲು ಶಬ್ದವೆನಿಸಿತ್ತು. ಅಪ್ಪುವಿನದೊಂದಂಶ ಆಕಾಶವ ಕೂಡಲು ಶಬ್ದವೆನಿಸಿತ್ತು. ಅಪ್ಪುವಿನದೊಂದಂಶ ವಾಯುವ ಕೂಡಲು ಸ್ಪರ್ಶವೆನಿಸಿತ್ತು. ಅಪ್ಪುವಿನದೊಂದಂಶ ಅಗ್ನಿಯ ಕೂಡಲು ರೂಪವಿಧಿಸಿತ್ತು. ಆಪ್ಪುವಿನದೊಂದಂಶ ಅಪ್ಪುವಿನಲ್ಲಿ ಕೂಡಲು ರಸವೆನಿಸಿತ್ತು. ಅಪ್ಪುವಿನದೊಂದಂಶ ಪೃಥ್ವಿಯ ಕೂಡಲು ಗಂಧವೆನಿಸಿತ್ತು. ಪೃಥ್ವಿಯದೊಂದಂಶ ಆಕಾಶವ ಕೂಡಲು ವಾಕ್ಕೆನಿಸಿತ್ತು. ಪೃಥ್ವಿಯದೊಂದಂಶ ವಾಯುವ ಕೂಡಲು ಪಾಣಿಯೆನಿಸಿತ್ತು. ಪೃಥ್ವಿಯದೊಂದಂಶ ಅಗ್ನಿಯ ಕೂಡಲು ಪಾದವೆನಿಸಿತ್ತು. ಪೃಥ್ವಿಯದೊಂದಂಶ ಅಪ್ಪುವ ಕೂಡಲು ಗುಹ್ಯವೆನಿಸಿತ್ತು, ಪೃಥ್ವಿಯದೊಂದಂಶ ಪೃಥ್ವಿಯಲ್ಲಿ ಕೂಡಲು ಪಾಯವೆಂದೆನಿಸಿತ್ತು. ಇಂತೀ ಪಂಚಭೂತಂಗಳ ಗುಣಮಿಶ್ರದಿಂದ ಆತ್ಮಂಗೆ ಪಂಚವಿಂಶತಿತತ್ವಮಾದಂಥ ದೇಹಮಾಯಿತ್ತು ಬಳಿಕ ಈ ಪಂಚವಿಂಶತಿತತ್ವದಿಂದ ಜಗದುತ್ಪತ್ಯವಾದುದು. ಅದೆಂತಾದುದೆಂದಡೆ: ಆ ಪಂಚಬ್ರಹ್ಮವೆನಿಸಿದ ಸದಾಶಿವಮೂರ್ತಿಯ ಸದ್ಯೋಜಾತಮುಖದಿಂದ ಪೃಥ್ವಿ ಪುಟ್ಟಿತ್ತು ಆ ಪೃಥ್ವಿಯ ವಾಮದೇವಮುಖದಿಂದಾದ ಅಪ್ಪುವಿನಿಂ ಕಲಸಿ, ಮೃತ್ಪಿಂಡಮಂ ಮಾಡಿ, ಅಘೋರ ಮುಖದಿಂದಾದ ಅಗ್ನಿಯಿಂ ದಹಿಸಿ, ತತ್ಪುರುಷಮುಖದಿಂದಾದ ವಾಯುವಿನಿಂ ಸೀತಳವೆನಿಸಿ, ಈಶಾನ್ಯಮುಖದಿಂದಾದ ಆಕಾಶದಿಂ ಆ ಮೃಪ್ಪಿಂಡದೊಳಗೆ ಬಯಲು ಮಾಡಿ, ಆ ಸುವರ್ಣಮಯ ಕಂತುಕವನೆ ಸದಾಶಿವಮೂರ್ತಿ ಅನೇಕಕಾಲ ಪಿಡಿದಿರ್ದು, ಆ ಮೂರ್ತಿಗೆ ಪ್ರಪಂಚುಲೀಲಾನಂದ ಮುಂದುಗೊಂಡು, ತನ್ನ ಸತ್ವ, ರಜ ತಮವೆಂಬ ಗುಣತ್ರಯದಿಂದೆ ಸೃಷ್ಟಿ ಸ್ಥಿತಿ ಲಯ ಕರ್ತೃವಾದಿಯಾದ ಬ್ರಹ್ಮ ವಿಷ್ಣು ರುದ್ರರನು ತನ್ನ ನೆನಹುಮಾತ್ರದಿಂದ ತತ್ವಮೂವತ್ತಾರರಿಂದ ದೇಹಿಗಳೆನಿಸಿ, ಆ ತ್ರೈಮೂರ್ತಿಗಳಿಗೆ ಅಹಂ ಮಮತೆಯುಂ ಪುಟ್ಟಿಸಿ, ಜೀವಾತ್ಮರೆನಿಸಿ, ಪುಣ್ಯ ಪಾಪವೆಂಬ ಕರ್ಮದುದ್ಯೋಗಮಂ ಪ್ರೇರಿಸಿ, ಜನನ ಮರಣ ದುಃಖ ಬಂಧ ಮೋಕ್ಷಂಗಳೆಂಬ ಭವಮಾಲೆಗೊಳಗುಮಾಡಿ, ಆ ಸುವರ್ಣಮಯ ಕಂತುವನೆ ಆ ಮೂರ್ತಿ ತನ್ನ ನಖಾಗ್ರದಿಂದ ಇಬ್ಬಾ ಎನಿಸಿ, ಅದಕ್ಕೆ ಕಪ್ಪರಕಟಹವೆಂದು ಹೆಸರಿಟ್ಟು, ಆ ತ್ರೈಮೂರ್ತಿಗಳಿಗೆ ಪ್ರಪಂಚು ನಿಮ್ಮಿಂದ ನಡೆಯಲೆಂದು ಕಟ್ಟಳೆಯಂ ಮಾಡಿದಲ್ಲಿ ಬ್ರಹ್ಮಾಂಡದ ಕರ್ಪರದೊಳಪೊಕ್ಕ ಕರಂಡ ಮುಚ್ಚಳವಂ ಮುಚ್ಚಿದಂತೆ, ಆ ಕಪ್ಪರಕಟಹಕ್ಕೆ ಬೆಸುಗೆಗೊಳಿಸಿ, ಬಳಿಕ ಅಂಡಜ ಶ್ವೇದಜ ಉದ್ವಿಜ ಜರಾಯುಜ ಮಂತ್ರಜವೆಂಬೈದು ತೆರದುತ್ಪತ್ಯದಿಂ ಸಮಸ್ತ ಸ್ಥಾವರ ಜಂಗಮಂಗಳು ಪಂಚಭೂತಕಾಯಮಂ ಧರಿಸಿ, ರೂಪು ವರ್ಣನಾಮ ಜಾತಿ ಭೇದಂಗಳಿಂದ ಪ್