Index   ವಚನ - 4    Search  
 
ನಿರಾಲಂಬ ಶರಣನೆಂತಿಹನೆಂದರೆ ಮನಬುದ್ಧಿ ಚಿತ್ತಾಹಂಕಾರಗಳಿಂದಾದ ತನುಕರಣಜಂಗುಳಿಯನುಳಿದು ಮೋಕ್ಷಕಾಯಶೂನ್ಯನಾಗಿ, ಭದ್ರಗಜ ನುಂಗಿದ ಬೇಳದ ಹಣ್ಣಿನಂತೆ, ಕರ್ಮರಹಿತವಾದ ಮಹದಾಕಾಶದಂತೆ, ಉಲುಹಡಗಿದ ಸುರಕುಜದಂತೆ, ಚಂದ್ರನಿಲ್ಲದ ಚಂದ್ರಿಕೆಯಂತೆ, ಫಲವಿಲ್ಲದ ರುಚಿಯಂತೆ, ಕುಸುಮವಿಲ್ಲದ ಪರಿಮಳದಂತೆ, ತರಂಗವಡಗಿದ ಸಮುದ್ರದಂತೆ, ಸ್ಪಟಿಕದ ಘಟಜ್ಯೋತಿಯಂತೆ ಸರ್ವಾಂಗದೊಳಹೊರಗೆಯು ಪ್ರಣವಮಂತ್ರವೆ ಪರಿಪೂರ್ಣಲಿಂಗವೆನಿಸಿ, ದಯಶಾಂತಭರಿತನಾಗಿ ತನ್ನ ನಂದು, ಇದಿರ ಮರೆದು, ವಸಂತಕಾಲದ ಮಂದಾನಿಲನಂತೆ ಸಂಚಾರದ ಮಾಳ್ಪನಯ್ಯಾ, ಮಹಾಲಿಂಗ ಶಶಿಮೌಳಿ ಸದಾಶಿವಾ.