Index   ವಚನ - 5    Search  
 
ಪ್ರಥಮದಲ್ಲಿ ಭಕ್ತಿಸ್ಥಲದಲ್ಲಿ ನಿಂದು, ಭಕ್ತನ ಆಚರಣೆಯ ಅನುಭಾವದಿಂ ತಿಳಿದು, ಮಹೇಶ್ವರಸ್ಥಲವನಂಗೀಕರಿಸಿ, ಮಹಾಪ್ರಸಾದಿ ವೀರವ್ರತದ ಆಚರಣೆಯ ಸಾವಧಾನಮಂ ಮಹಾಜ್ಞಾನದೊಳಿಳಿದು ಚಿತ್ತದೊಳವಲಂಬಿಸಿ, ಪ್ರಾಣಲಿಂಗಿಸ್ಥಲವನಂಗೀಕರಿಸಿ, ಲಿಂಗಾಂಗಸಮರಸದ ಪರಮಾನಂದವ ಸರ್ವಾಂಗದಲ್ಲಿ ಪರಿಪೂರ್ಣವೆನಿಸಿ, ಶರಣಸ್ಥಲವನಂಗೀಕರಿಸಿ, ಶರಣಸತಿ ಲಿಂಗಪತಿ ಎಂಬ ಪತಿವ್ರತಾಧರ್ಮವ ನಿಜದಿ ಕಂಕಣವ ಕಟ್ಟಿ, ಷಟ್ಸ್ಥಲದ ಸ್ವರೂಪಮಂ ಜ್ಞಾನಮುಖದಿಂ ತಿಳಿದು, ಸತ್ಕ್ರಿಯೆಗಳಿಂದವರವರ ಆಚರಣೆ ಲೋಪವಾಗದಂತೆ ಪೂರ್ಣವೆನಿಸಿ, ಅಂತಪ್ಪ ಜ್ಞಾನ ಕ್ರೀಯ ವಸ್ತು ಮಹಾಜ್ಞಾನದಿಂ ಲಯವನೈದಿಸಿ, ಆ ಮಹಾಜ್ಞಾನವನೆ ಮಹಾಲಿಂಗದಲ್ಲಿ ಅದೃಶ್ಯವ ಮಾಡಿದಾತನೆ ಐಕ್ಯನಯ್ಯಾ, ಮಹಾಲಿಂಗ ಶಶಿಮೌಳಿ ಸದಾಶಿವ.