Index   ವಚನ - 8    Search  
 
ಅಣುವಿಂಗಣು, ಮಹತ್ತಿಂಗೆ ಮಹತ್ತಪ್ಪ ಘನವನರಿತಲ್ಲಿ, ಮಣಿಮಾಲೆಯ ತಿರುಹಿ ತೊಳಲಲೇತಕ್ಕೆ ? ಅತ್ಯತಿಷ್ಠದ್ದಶಾಂಗುಲ ವಸ್ತುವಿಪ್ಪ ನೆಲೆಯನರಿತ ಮತ್ತೆ, ಹತ್ತಿಹಿತ್ತು ಹಾವಸೆಯೆಂದು ಒರಸಲೇತಕ್ಕೆ ? ಉತ್ತರಕಕ್ಷೆಯ ತಿಳಿದು, ಪೂರ್ವಕಕ್ಷೆಯನರಿತು, ಹೆಚ್ಚುಕುಂದೆಂಬ ಭಾವ ಅಚ್ಚೊತ್ತಿದಂತೆ ನಿಂದ ಮತ್ತೆ, ಕರ್ತೃ ಭೃತ್ಯತ್ವವೆಂಬ ಉಭಯದ ಸೂತಕ ಅಳಿದಲ್ಲಿಯೆ, ಕಾಮಧೂಮ ಧೂಳೇಶ್ವರನೆಂದೆನಲಿಲ್ಲ.