Index   ವಚನ - 27    Search  
 
ಇಷ್ಟದಲ್ಲಿ ಲಕ್ಷಿಸಿ ನೋಡಿಹೆನೆಂಬುದು, ಭಾವದಲ್ಲಿ ಭ್ರಮೆಯಳಿದು ಕಂಡೆಹೆನೆಂಬುದು, ಭೂತ ಭವಿಷ್ಯದ್ವರ್ತಮಾನಂಗಳ ನಿರಾಕರಿಸಿ ಕಂಡೆಹೆನೆಂಬುದು ಅದೇತರ ಚಿಹ್ನೆ? ಈ ತೆರದ ಭೇದಂಗಳಲ್ಲಿ ದೃಕ್ಕಿನ ಸೂತ್ರದ ಬೊಂಬೆಯಂತೆ, ತಾ ಕಂಡು ತನ್ನ ಕಾಣಿಸಿಕೊಂಬಂತೆ, ಇದಿರ ದೃಶ್ಯಕ್ಕೆ ತಾನೊಳಗಾಗಿ, ತನ್ನ ದೃಶ್ಯ ತನ್ನೊಳಗಾದ ಮತ್ತೆ ಅನ್ಯಭಿನ್ನವೆಂಬ ಉಭಯವಡಗಿತ್ತು, ಕಾಮಧೂಮ ಧೂಳೇಶ್ವರನಲ್ಲಿ.