ನೋಡುವ ನೋಟ ತಾನೆಯಾದ ಮತ್ತೆ,
ನೋಡಿಸಿಕೊಂಬುದೊಂದೂ ಇಲ್ಲ.
ಕೂಡಿಹೆನೆಂಬ ಕೂಡ ಎರಡಳಿದಲ್ಲಿ, ಉಭಯವೆಂಬ ನಾಮವಿಲ್ಲ.
ಅರ್ಪಿಸಿಕೊಂಬುದೊಂದು ವಸ್ತು.
ಅರ್ಪಿಸಿಕೊಂಬುದೊಂದು ಚಿತ್ತ.
ಎರಡೆಂಬ ಭಾವವಾದಲ್ಲಿ ಲಿಂಗಕ್ಕೆ ದೂರ.
ಅರಿದ ಅರಿವಿಂಗೆ ಸೂತಕ.
ಪರುಷದ ಪುತ್ಥಳಿಯಲ್ಲಿ, ಲೋಹದ ಅವಯವಂಗಳುಂಟೆ ?
ಪರಿಪೂರ್ಣವಾದ ಪರಂಜ್ಯೋತಿಗೆ
ಪರಕ್ಕೆ ಕೊಟ್ಟು, ಆ ಪರವನರಿದೆಹೆನೆಂಬ
ಪರಿಭ್ರಮಣದ ಸೂತಕವಿಲ್ಲ.
ಸಂದಿಲ್ಲದ ವಸ್ತುವಿಗೆ ಮೇಲೆ ಕಂಡೆಹೆನೆಂದಡೆ ಒಂದೂ ಇಲ್ಲ,
ಕಾಮಧೂಮ ಧೂಳೇಶ್ವರಾ.
Art
Manuscript
Music
Courtesy:
Transliteration
Nōḍuva nōṭa tāneyāda matte,
nōḍisikombudondū illa.
Kūḍ'̔ihenemba kūḍa eraḍaḷidalli, ubhayavemba nāmavilla.
Arpisikombudondu vastu.
Arpisikombudondu citta.
Eraḍemba bhāvavādalli liṅgakke dūra.
Arida ariviṅge sūtaka.
Paruṣada put'thaḷiyalli, lōhada avayavaṅgaḷuṇṭe?
Paripūrṇavāda paran̄jyōtige
parakke koṭṭu, ā paravanaridehenemba
paribhramaṇada sūtakavilla.
Sandillada vastuvige mēle kaṇḍ'̔ehenendaḍe ondū illa,
kāmadhūma dhūḷēśvarā.