Index   ವಚನ - 69    Search  
 
ಪೂಜಿಸಿಕೊಂಬುದು, ಪೂಜಿಸಿಹೆನೆಂಬುದು, ಉಭಯದ ಸೂತಕವುಳ್ಳನ್ನಕ್ಕ ಪರಿಪೂರ್ಣ ಜ್ಞಾನವುಂಟೆ ? ನಾನೆಂಬನ್ನಕ್ಕ ವಿಚಾರಿಸಿಕೊಂಡು, ನೀನೆಂಬನ್ನಕ್ಕ ಪರಿಪೂರ್ಣವಸ್ತುವೆಂಬುದುಂಟೆ ? ಕಾಯದ ಸುಳುಹು ನಿಂದು, ಜೀವನ ಪ್ರಕೃತಿ ಹಿಂಗಿ ಮೇಲೊಂದ ಕಂಡೆಹೆನೆಂಬುದು ಜೀವನಲ್ಲದೆ ಪರಮನಲ್ಲ. ಕಂಡೆಹೆನೆಂಬುದೆ ಜೀವ, ಕಾಣಿಸಿಕೊಂಡೆಹೆನೆಂಬುದೆ ವಸ್ತು. ಉಭಯಶೂನ್ಯವಾಗಿ ನಿಂದುದು, ಕಾಮಧೂಮ ಧೂಳೇಶ್ವರನೆಂಬುದು ತಾನೆ.