Index   ವಚನ - 73    Search  
 
ಬಣ್ಣವನರಿಯದ ಬಯಲಿನಂತೆ, ಭಿನ್ನ ಅಭಿನ್ನವನರಿಯದ ಬೆಳಗಿನಂತೆ, ಛಿನ್ನ ವಿಚ್ಫಿನ್ನವನರಿಯದ ಪರಿಪೂರ್ಣದಂತೆ, ಅವಧಿಗೊಡಲಿಲ್ಲದ ಭಾವವಿರಹಿತನಾದೆಯಲ್ಲಾ. ಸುಳುಹುಗೆಟ್ಟು ಸೂಕ್ಷ್ಮವರತು, ಬೆಳಗೆಂಬ ಕಳೆನಾಮ ನಷ್ಟವಾಗಿ, ಅದೆಂತೆಯಿದ್ದಿತ್ತು, ಅಂತೆ ಆದೆಯಲ್ಲಾ ಕಾಮಧೂಮ ಧೂಳೇಶ್ವರಾ.