ಬಯಲು ಬಯಕೆಗೆ ಒಳಗಾದಲ್ಲಿ ಇಕ್ಕುವರಿನ್ನಾರೊ ?
ಅರಿವ ಆತ್ಮ ಪ್ರಕೃತಿ ರೂಪಾದಲ್ಲಿ ಬೇಡಾ
ಎಂದು ಬಿಡಿಸುವರಾರೊ ?
ದೀಪವೊಂದರಲ್ಲಿ ಉದಿಸಿ, ಹಲವು ಜ್ಯೋತಿಯ ಕುರುಹಿಟ್ಟಂತೆ,
ಆತ್ಮವೊಂದರಲ್ಲಿ [ಉದಿಸಿ] ಹಲವು ಇಂದ್ರಿಯಂಗಳಾದ ಸಂದನರಿಯದೆ,
ಅವ ಬಂದಬಂದಂತೆ ಆಡುವ ಸಂದೇಹಿಗಳಿಗುಂಟೆ, ನಿಜಾಂಗದ ನಿಜ ?
ಈ ದ್ವಂದ್ವವನಳಿದು ಒಂದೆಂದಲ್ಲಿ, ಅದು ನಿಜದ ಸಂಗ.
ಆ ಸಂಗವ ಹಿಂಗಿದಲ್ಲಿ, ಕಾಮಧೂಮ ಧೂಳೇಶ್ವರನು
ಒಂದರವನೂ ಅಲ್ಲ.