Index   ವಚನ - 85    Search  
 
ಯುಕ್ತಿಯಿಂದ ಚಿತ್ರಾರ್ಥವ ಕಾಬ ಆತ್ಮನು ತನ್ನ ಹೆಚ್ಚುಗೆ ತಗ್ಗನರಿಯದೆ, ಮತ್ತತ್ವದಿಂದ ಕೆಲವನಾಡಿ, ಎಚ್ಚತ್ತಲ್ಲಿ ಚಿತ್ರವನಾಡುವುದು. ಅದು ಸಚ್ಚಿತ್ತ, ಒಂದೋ, ಎರಡೋ ? ಕೆಟ್ಟಲ್ಲಿ ಕೆಂಡವಾಗಿ, ಉರಿದಲ್ಲಿ ಬೆಂಕಿಯಾಗಿ, ಉಭಯಕ್ಕೆ ಬೇರೊಂದೊಡಲುಂಟೆ ? ಕಾಷ್ಠವುಳ್ಳನ್ನಕ್ಕ ಹೊತ್ತಿ, ಕಾಷ್ಠ ಹಿಂಗಿದ ಮತ್ತೆ ಹೊತ್ತಬಲ್ಲುದೆ ? ದೃಷ್ಟದ ಇಷ್ಟ ಚಿತ್ತದಲ್ಲಿ ಲೋಪವಾದ ಮತ್ತೆ, ಕಟ್ಟಿಬಿಟ್ಟೆನೆಂಬುದು ಇತ್ತಲೆ ಉಳಿಯಿತ್ತು, ಕಾಮಧೂಮ ಧೂಳೇಶ್ವರಾ.