Index   ವಚನ - 105    Search  
 
ಸುಳಿವ ಅನಿಲಂಗೆ ಮೈಯೆಲ್ಲ ಕೈ. ಸುಡುವ ಅನಲಂಗೆ ಭಾವವೆಲ್ಲ ಬಾಯಿ. ಹಲಿವ ನೀರಿಂಗೆ ತನ್ಮ[ಮಯ್ಯೆ]ಲ್ಲ ಅಡಿ. ಅರಿಯದೆ ಮರೆಯದೆ ಮುಟ್ಟಿಹಂಗೆ ಕಡೆ ನಡು ಮೊದಲೆಂದು ಅರ್ಪಿತವಿಲ್ಲ. ಇಲ್ಲಾ ಎಂಬ ಸೂತಕಕ್ಕೆ ಮುನ್ನವೆ ಇಲ್ಲ, ಕಾಮಧೂಮ ಧೂಳೇಶ್ವರನು.