Index   ವಚನ - 106    Search  
 
ಹಲವು ಚಿತ್ರವ ನೆನೆವ ಮನಕ್ಕೆ ಬೇರೆ ಸಲೆ ವಸ್ತು, ಒಂದೆಂದು ನೆಲೆಯಲ್ಲಿ ನಿಲಬಲ್ಲುದೆ ? ಜಲವ ತಪ್ಪಿದ ಮತ್ಸ್ಯ, ಬಿಲವ ತಪ್ಪಿದ ಸರ್ಪ, ನೆಲೆಯ ತಪ್ಪಿದ ಆತ್ಮ ಬೇರೊಂದಕ್ಕೆ ಒಲವರವುಂಟೆ ? ಕಳನನೇರಿಯಿಳಿದ ಮತ್ತೆ, ಒಡೆಯನ ಹೊಲಬಿಲ್ಲಾ ಎಂದೆ, ಕಾಮಧೂಮ ಧೂಳೇಶ್ವರಾ.