Index   ವಚನ - 8    Search  
 
ತನ್ನಲ್ಲಿ ಒಂದು ಗುಣ ತೋರಲಿಕೆ, ಆ ಗುಣವ ಇದಿರ ಕಂಡು ನುಡಿದರೆಂದು ನೋಯಲೇಕೆ? ಆ ನುಡಿ ತನಗೆ ನಿರುತ್ತರವೆಂಬುದನರಿತು, ಘಾಯ ಬಾವುಗಳಲ್ಲಿ, ಶೋಣಿತ ಹೊರೆಯಲ್ಲಿ ನಿಂದಿರಲಿಕ್ಕಾಗಿ, ಪಾಳಿಸಿ ಹೊರವಡಿಸಿದಾತನೇನು ಹಗೆಯೇ? ತನಗೆಂಬುದನರಿತು ತನ್ನಲ್ಲಿ ಉಂಟಾದ ಅವಗುಣ, ತನಗೆ ತೋರಿದಡೆ, ದೃಷ್ಟವ ಕಂಡು ಹೇಳಿದ ಮತ್ತೆ ಮಿಥ್ಯಗುಣವಿಲ್ಲದೆ ಆ ಕಪಟಗುಣವ ಬಿಡಬೇಕು. ಈ ಗುಣ ಅಂಗವಿರ್ದಲ್ಲಿ, ನಿಂದೆ ದುರ್ಗುಣ ಸೋಂಕದಿಹುದೆ ? ಅರಿಯದೆ ಸೋಂಕಿದಲ್ಲಿ, ಅರಿದ ಮತ್ತೆ ತೊರೆಯಬೇಕು. ತೊರೆದಡೆ ಕೂಗಿನ ದನಿಗೆ ಹೊರಗು, ಮಹಾಮಹಿಮ ಮಾರೇಶ್ವರಾ.