Index   ವಚನ - 23    Search  
 
ದೇವ ದೇವ ಶರಣು ಶರಣಾರ್ಥಿ, ಅವಧರಿಸಯ್ಯಾ. ಕೇಳಿದ ಸುಖ ಕಿವಿಗೆ ಬೇಟವಾಯಿತ್ತು. ಕಿವಿಗಳ ಬೇಟ ಕಂಗಳಮುಂದೆ ಮೂರ್ತಿಗೊಂಡಿತ್ತು. ಕಂಗಳ ಮುಂದೆ ಕಂಡ ಸುಖವು ಮನಕ್ಕೆ ವೇದ್ಯವಾಯಿತ್ತು. ಶಿವಶರಣರ ದರುಶನದ ಸುಖವನೇನೆಂದೆನಬಹುದು? ಮದವಳಿದು ಮಹವನೊಡಗೂಡಿದ ಎನ್ನ ಅಜಗಣ್ಣನನಗಲಿದ ದುಃಖ ನಿಮ್ಮ ಸಂಗದಲ್ಲಿ ಸಯವಾಯಿತ್ತು ಕಾಣಾ ಪ್ರಭುವೆ.