Index   ವಚನ - 24    Search  
 
ನಡೆದು ನಡೆದು ನಡೆಯ ಕಂಡವರು, ನುಡಿದು ನುಡಿದು ಹೇಳುತ್ತಿಹರೆ? ನುಡಿದು ನುಡಿದು ಹೇಳುವನ್ನಕ್ಕರ, ನಡೆದುದೆಲ್ಲಾ ಹುಸಿಯೆಂಬೆನು. ಮಾತಿನ ಮಥನದಿಂದಾದ ಅರಿವು, ಕರಣಮಥನದಿಂದಾದುದಲ್ಲದೆ, ಅನುಪಮ ಸ್ವರಭೇದವಾದ ಪರಿ ಎಂತು ಹೇಳಾ? ಇದಿರ ಗೆಲಬೇಕೆಂದು ನುಡಿದುಕೊಂಡಡೇನು, ಮನಕ್ಕೆ ಮನವೆ ಸಾಕ್ಷಿಯಾಗಿ ನಿಃಪತಿಯಲ್ಲ ನೋಡಾ? ಎನ್ನ ಅಜಗಣ್ಣತಂದೆ ಶಬುದಕ್ಕೆ ಹೇಸಿ, ಮುಗುದನಾದನು.