Index   ವಚನ - 26    Search  
 
ನುಡಿಯಲುಬಾರದು ಕೆಟ್ಟನುಡಿಗಳ. ನಡೆಯಲುಬಾರದು ಕೆಟ್ಟನಡೆಗಳ. ನುಡಿದಡೇನು ನುಡಿಯದಿರ್ದಡೇನು? ಹಿಡಿದವ್ರತ ಬಿಡದಿರಲು, ಅದೆ ಮಹಾಜ್ಞಾನದಾಚರಣೆ ಎಂಬೆನು ಅಜಗಣ್ಣತಂದೆ.