Index   ವಚನ - 5    Search  
 
ದೀಕ್ಷಿತನು ಯಜನಾರ್ಥಿಯಾಗಿ, ಭೂಶುದ್ಧಿಯಂ ಮಾಡಿ, ಯೂಪಸ್ತಂಭವಂ ಪ್ರತಿಷ್ಠೆಯಂ ಮಾಡಿ, ಋತ್ವಿಜರಂ ಕೂಡಿ, ಮಹಾಘೋರಾಟವಿಯಲ್ಲಿ ಕಳಪುಲ್ಲಂ ತಿಂದು ಕೊಳಕುನೀರಂ ಕುಡಿದು ಅಧೋಮುಖಗಳಾಗಿ ಸಂಚರಿಸುವ ಪಶುಸಮೂಹಗಳೊಳೊಂದು ಸಲಕ್ಷಣಮಾದ ಪಶುವಂ ಪಿಡಿದು, ಯೂಪಸ್ತಂಭದಲ್ಲಿ ಹರಿಯದ ಹಗ್ಗದಲ್ಲಿ ಕಟ್ಟಿ, ಅತಿಖಾತಮಪ್ಪ ಯಜ್ಞಕುಂಡವಂ ಚೆನ್ನಾಗಿ ಸಮೆದು, ಒಣಗಿಯೊಣಗದ ಕಾಷ್ಠಗಳಿಂದಗ್ನಿಯ ಹೊತ್ತಿಸಿ, ಅತಿಸುಗಂಧಮಾದ ಘೃತಮಂ ಮಂತ್ರಘೋಷದಿಂದಾಹುತಿಗೊಡುತ್ತಿರೆ, ಅಗ್ನಿಯು ಪಟುವಾಗಿ, ನಿಜವಾಸನಾಧೂಪದಿಂ ಸಕಲದೇವತೆಗಳಂ ತೃಪ್ತಿಬಡಿಸಿ ಋತ್ವಿಕ್ಕುಗಳನೊಳಕೊಂಡು ದೀಕ್ಷಿತನಂ ವಿೂರಿ, ಪಾಶಮಂ ದಹಿಸಿ, ಕಂಭದಲ್ಲಿ ಬೆರೆದು ಪರಮಶಾಂತಿಯನೆಯ್ದಿದ ತಾನೇ ಸೋಮಯಾಜಿಯಾಯಿತು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.