ಆದಿಯಲ್ಲಿ ಪ್ರಣವಸ್ವರೂಪಮಾದ ಪರಮಾತ್ಮನು
ಅಕಾರ ಉಕಾರ ಮಕಾರವೆಂಬ ಅಕ್ಷರತ್ರಯಸ್ವರೂಪಮಾಗಿ,
ಅಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಳೆ;
ಬಿಂದುವೇ ಶರೀರಮಾಗಿ,
ನಾದವೇ ಪ್ರಾಣಮಾಗಿ, ಕಳೆಯೇ ಮನಮಾಗಿ;
ಬಿಂದುಮಯವಾದ ಶರೀರದಲ್ಲಿ ರೂಪು
ನಾದಮಯಮಾದ ಪ್ರಾಣದಲ್ಲಿ ನಾಮ
ಕಳಾಮಯಮಾದ ಮನದಲ್ಲಿ ಕ್ರಿಯೆ
ಇಂತು ನಾಮ-ರೂಪ-ಕ್ರಿಯಾಯುಕ್ತಮಾದ ಪುರುಷನ
ಶರೀರದಲ್ಲಿ ಭಕ್ತಿ, ಪ್ರಾಣದಲ್ಲಿ ಜ್ಞಾನ,
ಮನದಲ್ಲಿ ವೈರಾಗ್ಯ ನೆಲೆಗೊಂಡಲ್ಲಿ,
ಬಿಂದುವಿನಲ್ಲಿ ಆಚಾರಲಿಂಗಸಂಬಂಧಮಾಯಿತ್ತು,
ನಾದದಲ್ಲಿ ಗುರುಲಿಂಗಸಂಬಂಧವಾಯಿತ್ತು.
ಕಳೆಯಲ್ಲಿ ಶಿವಲಿಂಗಸಂಬಂಧಮಾಯಿತ್ತು.
ಆಚಾರದಿಂದ ಪೂತಮಾದ
ಶರೀರವೇ ಜಂಗಮಲಿಂಗಮಾಯಿತ್ತು.
ಗುರುಮಂತ್ರದಿಂದ ಪೂತಮಾದ
ಪ್ರಾಣವೇ ಪ್ರಸಾದಲಿಂಗಮಾಯಿತ್ತು.
ಶಿವಧ್ಯಾನದಿಂದ ಪೂತಮಾದ
ಪ್ರಾಣವೇ ಪ್ರಸಾದಲಿಂಗಮಾಯಿತ್ತು.
ಬಿಂದುವಿನಲ್ಲಿ ಕ್ರಿಯಾಶಕ್ತಿ ನೆಲೆಗೊಂಡಲ್ಲಿ,
ಆ ಬಿಂದುವೇ ಆದಿಶಕ್ತಿಮಯಮಾಯಿತ್ತು.
ನಾದದಲ್ಲಿ ಮಂತ್ರಶಕ್ತಿ ನೆಲೆಗೊಂಡಲ್ಲಿ,
ಆ ನಾದವೇ ಪರಾಶಕ್ತಿಯಾಯಿತ್ತು.
ಕಳೆಯಲ್ಲಿ ಇಚ್ಛಾಶಕ್ತಿ ನೆಲೆಗೊಂಡಲ್ಲಿ,
ಆ ಕಳೆಯೇ ಜ್ಞಾನಶಕ್ತಿಯಾಯಿತ್ತು.
ಇಂತು ಶರೀರಮೇ ಜಂಗಮದಿಂದ ಪವಿತ್ರಮಾಗಿ,
ಪ್ರಾಣವು ಗುರುವಿನಿಂದ ಪವಿತ್ರಮಾಗಿ,
ಮನವು ಲಿಂಗದಿಂದ ಪರಿಶುದ್ಧಮಾಗಿರ್ದ ಶಿವಶರಣನು
ಇದ್ದುದೇ ಕೈಲಾಸ, ಅನುಭವಿಸಿದುದೆಲ್ಲಾ ಲಿಂಗಭೋಗ,
ಐಕ್ಯವೇ ಲಿಂಗೈಕ್ಯ ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
Art
Manuscript
Music
Courtesy:
Transliteration
Ādiyalli praṇavasvarūpamāda paramātmanu
akāra ukāra makāravemba akṣaratrayasvarūpamāgi,
akāravē nāda, ukāravē bindu, makāravē kaḷe;
binduvē śarīramāgi,
nādavē prāṇamāgi, kaḷeyē manamāgi;
bindumayavāda śarīradalli rūpu
nādamayamāda prāṇadalli nāma
kaḷāmayamāda manadalli kriye
intu nāma-rūpa-kriyāyuktamāda puruṣana
śarīradalli bhakti, prāṇadalli jñāna,
Manadalli vairāgya nelegoṇḍalli,
binduvinalli ācāraliṅgasambandhamāyittu,
nādadalli guruliṅgasambandhavāyittu.
Kaḷeyalli śivaliṅgasambandhamāyittu.
Ācāradinda pūtamāda
śarīravē jaṅgamaliṅgamāyittu.
Gurumantradinda pūtamāda
prāṇavē prasādaliṅgamāyittu.
Śivadhyānadinda pūtamāda
prāṇavē prasādaliṅgamāyittu.
Binduvinalli kriyāśakti nelegoṇḍalli,
ā binduvē ādiśaktimayamāyittu.
Nādadalli mantraśakti nelegoṇḍalli,
ā nādavē parāśaktiyāyittu.
Kaḷeyalli icchāśakti nelegoṇḍalli,
ā kaḷeyē jñānaśaktiyāyittu.
Intu śarīramē jaṅgamadinda pavitramāgi,
prāṇavu guruvininda pavitramāgi,
manavu liṅgadinda pariśud'dhamāgirda śivaśaraṇanu
iddudē kailāsa, anubhavisidudellā liṅgabhōga,
aikyavē liṅgaikya kāṇā
mahāghana doḍḍadēśikāryaguruprabhuve.